ಮಕ್ಕಳ ಮನೆ ಶಾಲೆಗೆ ಟಿವಿ ಕೊಡುಗೆ - News5Kannada

ಅರಕಲಗೂಡು :  ಶಾಸಕ ಎ. ಮಂಜುರವರ ಪರಿಕಲ್ಪನೆಯಂತೆ ತಾಲೂಕಿನ ಸಂತೆಮರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಪ್ರಾರಂಭಿಸಲಾದ ಮಕ್ಕಳ ಮನೆ ಶಾಲೆಯಲ್ಲಿ ಉತ್ತಮವಾಗಿ  ಯುಕೆಜಿ  ತರಗತಿ ಓದುತ್ತಿರುವ ತಮ್ಮ ಪುತ್ರ ಆರ್ಯನ್ ಕಲಿಕೆಯನ್ನು ಸ್ವಾಗತಿಸಿ ತಂದೆ ಚಂದ್ರಶೇಖರ್ ಅವರು 32ಇಂಚು ಟಿವಿಯನ್ನು ಕೊಡುಗೆಯಾಗಿ ನೀಡಿದರು.
ಸಂತೆಮರೂರು ಗ್ರಾಮದ ನಿವಾಸಿಯಾಗಿರುವ ಚಂದ್ರಶೇಖರ ಅವರು ಹಾಸನದ ಪ್ರಖ್ಯಾತ ಕಂಪನಿಯಲ್ಲಿ ಸೂಪರ್‌ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಾಧ್ಯವಾದಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ  ಚಂದ್ರಶೇಖರ ಅವರ ತಾಯಿ ಸಣ್ಣತಾಯಮ್ಮ ಅವರನ್ನು ಗೌರವಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ ಮೇಡಂ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಊರಿನ ಗ್ರಾಮಸ್ಥರು, ಶಾಲೆಯ ಸಹ ಶಿಕ್ಷಕರು, ಮಕ್ಕಳ ಮನೆ ಶಿಕ್ಷಕಿ ಹಾಗೂ ಮಕ್ಕಳ ಮನೆ ಸಹಾಯಕಿಯವರು ಹಾಜರಿದ್ದರು.

ಎಲ್ಲಾ ಶಾಲೆಗಳ ಹಳೆಯ ವಿದ್ಯಾರ್ಥಿಗಳು ಇದೇ ರೀತಿಯ ಸಹಕಾರ ನೀಡಿದರೆ, ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ರೈತರ ಮಕ್ಕಳಿಗೆ ಇನ್ನೂ ಹೆಚ್ಚು ಶೈಕ್ಷಣಿಕವಾಗಿ ಅನುಕೂಲಕರ ವಾತಾವರಣ ನಿರ್ಮಿಸಲು ಸಹಕಾರಿಯಾಗುತ್ತದೆ ಎಂದು ಶಾಸಕ ಎ.ಮಂಜು ಅವರು ಮನವಿ ಮಾಡಿದರು ಹಾಗೂ ಸಂತೆಮರೂರಿನ ಚಂದ್ರಶೇಖರ ಅವರ ಈ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 

                       News5 - Ravi Dummi 

Post a Comment

Previous Post Next Post