ಅರಕಲಗೂಡಿನಲ್ಲಿ “ಕೊಲ್ಮಿಂಚು” ಕಾರ್ಯಕ್ರಮ – ವಿದ್ಯಾರ್ಥಿಗಳಿಗೆ ಟಾಪರ್ ಟಿಪ್ಸ್

ಅರಕಲಗೂಡು: ಕೊಲ್ಮಿಂಚು ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ “ಟಾಪರ್ ಟಿಪ್ಸ್” ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿತ್ತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎ. ಮಂಜು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಮ್ಮಣ್ಣ ಗೌಡರು, ಬಿಇಒ ಕೆ.ಪಿ. ನಾರಾಯಣ್, ಮಧುಕರ್ ಪ್ರೌಢ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರು ಹಾಗೂ ಅಕ್ಷರ ದಾಸೋಹ ನಿರ್ದೇಶಕರಾದ ರಂಗಸ್ವಾಮಿ   ಭಾಗವಹಿಸಿದ್ದರು.
ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯವನ್ನು ದೂರ ಮಾಡುವ ಉದ್ದೇಶದಿಂದ “ಪರೀಕ್ಷೆ ಹೇಗೆ ಎದುರಿಸಬೇಕು?” ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಿತು. ಕಳೆದ ವರ್ಷ 100ಕ್ಕೆ 100 ಅಂಕಗಳನ್ನು ಪಡೆದ ಉತ್ತರ ಪತ್ರಿಕೆಗಳನ್ನು “ಕೊಲ್ಮಿಂಚು” ಪುಸ್ತಕದಲ್ಲಿ ಮುದ್ರಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
2024-25ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಯನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿ ತನ್ನ ಅಭ್ಯಾಸ ವಿಧಾನ, ಸಮಯ ನಿರ್ವಹಣೆ ಹಾಗೂ ಪರೀಕ್ಷೆಗೆ ಆತ್ಮವಿಶ್ವಾಸದಿಂದ ಹೇಗೆ ಸಿದ್ಧರಾಗಬೇಕು ಎಂಬುದರ ಕುರಿತು ಪ್ರೇರಣಾದಾಯಕ ಮಾತುಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಹೆಚ್ಚಿನ ಉತ್ಸಾಹ ಮತ್ತು ಆತ್ಮಸ್ಥೈರ್ಯ ತುಂಬಿದ ಮಹತ್ವದ ಕಾರ್ಯಕ್ರಮವಾಗಿ ರೂಪುಗೊಂಡಿತು.

Post a Comment

Previous Post Next Post