Arkalgud : ಅರಾಧನಾ ಪುಸ್ತಕ ಬಿಡುಗಡೆ

ಅರಕಲಗೂಡು : ಪಟ್ಟಣದ ವಿಪ್ರ ಮಹಿಳಾ ಬಳಗದ ವತಿಯಿಂದ ಹೊರತಂದಿರುವ ಆರಾಧನಾ ಎಂಬ ಭಜನಾ ಪುಸ್ತಕವನ್ನು ಶಾಸಕ ಎ.ಮಂಜು ಅವರು ಬಿಡುಗಡೆ ಮಾಡಿದರು.

ಪಟ್ಟಣದ ಕೋಟೆ ಶ್ರೀ ಅಮೃತೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ‌ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ,ನಂತರ ಪುಸ್ತಕ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಶಾಸಕ ಎ.ಮಂಜು ಅವರು ಭಕ್ತಿ ಗೀತೆಗಳು ಭಕ್ತರನ್ನು ದೇವರ ಬಳಿಗೆ ಕರೆದೊಯ್ಯಬಹುದಾದ ಮಾರ್ಗವಾಗಿದೆ ಎಂದರು.ಗೀತೆಗಳನ್ನು ಪುಸ್ತಕ ರೂಪದಲ್ಲಿ ತಂದಿರುವುದು ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕಾರೊನೇಷನ್ ಸಹಕಾರ ಸಂಘದ ಅಧ್ಯಕ್ಷರಾದ ಪತ್ರಕರ್ತ ಎ.ಆರ್.ಸುಬ್ಬರಾವ್ ಅವರು ದಾಸಶ್ರೇಷ್ಠರುಗಳು  ತಮ್ಮ ಭಕ್ತಿ ಬಾವಗಳಿಗನುಗುಣವಾಗಿ ರಚಿಸಿದ ಕೀರ್ತನೆಗಳು ಅಂದು ಸಮಾಜದ ಸುಧಾರಣೆಗಳಿಗನುಗುಣವಾಗಿ ರಚಿತವಾದವುಗಳಾಗಿದ್ದು,ಪುರಂದರದಾಸರು,ಕನಕದಾಕದಾಸರು,ತ್ಯಾಗರಾಜರು ಹೀಗೆ ಹಲವು ದಾಸವರೇಣ್ಯರು ನೀಡಿದ ಕೀರ್ತನೆಗಳು ಇಂದು ಜನಸಾಮಾನ್ಯರು ಭಕ್ತಿಯ ಮೂಲಕ ದೇವರನ್ನು ಕಾಣುವ ಮಾರ್ಗವಾಗಿ ರೂಪಿತವಾಗಿದೆ.ಸಾಮೂಹಿಕ ಭಜನೆಗಳು ಇಂದು ನಮ್ಮನ್ನು ಪರಸ್ಪರ ಒಗ್ಗೂಡಿಸುವ ಮಂತ್ರವೂ ಆಗಿದೆ.ನೊಂದ ಮನಸ್ಸಿಗೆ ಸಾಂತ್ವನ ಹೇಳುವ ಕೀರ್ತನೆಗಳು ಮನಸ್ಸನ್ನು ಚೈತನ್ಯ ಗೊಳಿಸುತ್ತವೆ ಎಂದರು.

   ಕಾರ್ಯಕ್ರಮದಲ್ಲಿ ಬ್ರಾಹ್ಮಣ ಮಹಾಸಭಾದ ಮಾಜಿ ಕಾರ್ಯದರ್ಶಿ ಎ.ಎನ್.ಗಣೇಶ ಮೂರ್ತಿ,ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ರುಕ್ಮಿಣಿ ಗುಂಡೂರಾವ್,ಉಪಾಧ್ಯಕ್ಷೆ ವಾಣಿ ಚಿದಂಬರಬಾಬು,ಮಾಜಿ ಅಧ್ಯಕ್ಷೆ ಸುಮಿತ್ರಮ್ಮ ಹಿರಣ್ಣಯ್ಯ ಮಾತನಾಡಿದರು.     

ಬಳಗದ ಕಾರ್ಯದರ್ಶಿ ಸುಧಾರಮೇಶ್,ಖಜಾಂಚಿ ಸವಿತಾ ಶ್ರೀಧರ್ ಇತರರು ಇದ್ದರು.

Post a Comment

Previous Post Next Post