ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಈ ಬಾರಿ ಬೀದರನಲ್ಲಿ ಮಾರ್ಚ್ ಅಂತ್ಯದಲ್ಲಿ ಆಯೋಜಿಸಲಾಗುತ್ತಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ
ಭಾಗವಹಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ
ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ನೇತೃತ್ವದ ಕೆಯುಡಬ್ಲ್ಯೂಜೆ ನಿಯೋಗವು ಲೋಕಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಮನವಿ ಮಾಡಿ ಆಹ್ವಾನಿಸಿತು.
ಸಂಘದ ಮನವಿಗೆ ಪ್ರತಿಕ್ರಿಯಿಸಿದ ರಾಜ್ಯಪಾಲರು, ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತನಾಗಿದ್ದೇನೆ ಎಂದರು. ರಾಜ್ಯಸಂಘದ ಇತಿಹಾಸವನ್ನು ಕೇಳಿಕೊಂಡ ಅವರು ಡಿವಿಜಿ ಸಂಸ್ಥಾಪಿಸಿದ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೇಣಿಗೆ ನೀಡಿದ ಸಂಘಕ್ಕೆ ತೊಂಬತ್ತೈದು ವಸಂತ ತುಂಬುತ್ತಿರುವ ಬಗ್ಗೆ ಮೆಚ್ಚುಗೆ ಮತ್ತು ಅಭಿಮಾನ ವ್ಯಕ್ತಪಡಿಸಿದರು.
ಇದೇ ಸಂಧರ್ಭದಲ್ಲಿ ಅವರಿಗೆ ಕೆಯುಡಬ್ಲ್ಯೂಜೆ ನೆನಪಿನ ಸಂಚಿಕೆ, ಕೋವಿಡ್ ಕಥೆಗಳು ಮತ್ತು ಅಮೃತ ಬೀಜ ಪುಸ್ತಕವನ್ನು ನೀಡಲಾಯಿತು. ಕೆಯುಡಬ್ಲ್ಯೂಜೆ ಲೋಗೋ ಜೊತೆಗೆ ಅವರದೇ ಭಾವಚಿತ್ರವಿರುವ ಕಾಫಿ ಕಪ್ ಮತ್ತು ಕೆಯುಡಬ್ಲ್ಯೂಜೆ ಕ್ಯಾಲೆಂಡರ್ ನೀಡಲಾಯಿತು.
ಕಾರ್ಯದರ್ಶಿ ಸೋಮಶೇಖರ ಕೆರಗೋಡು, ಖಜಾಂಚಿ ವಾಸುದೇವ ಹೊಳ್ಳ ಅವರುಗಳು ನಿಯೋಗದಲ್ಲಿದ್ದರು.
Tags
ಬೆಂಗಳೂರು