ಕೊಣನೂರಿನ ಎಂ ಕೆ ಎಸ್ ಲಯನ್ಸ್ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಂದ ಆಹಾರ ಹಬ್ಬ ಸಂಭ್ರಮ...!

ಅರಕಲಗೂಡು : ತಾಲೂಕಿನ ಕೊಣನೂರು ಎಂ ಕೆ ಎಸ್ ಲಯನ್ಸ್ ಶಾಲೆಯ ಆವರಣದಲ್ಲಿ ನಡೆದ ಆಹಾರ ಹಬ್ಬದಲ್ಲಿ ಗುಲಾಬ್ ಜಾಮೂನ್, ಪ್ರೋಟ್ ಸಲಾಡ್. ಮಿಲ್ಕಶೇಕ್, ಪಾನಿಪೂರಿ, ಗೋಲಗೊಪ್ಪ, ಬರ್ಡ್ ನೆಸ್ಟ್ , ಸಮೋಸಾ, ಪ್ರಶ್ ಪ್ರೊಟ್ಸ್, ಚುರುಮುರಿ, ಮಸಾಲ ಮಜ್ಜಿಗೆ , ಕಾಳು ಉಸುಳಿ, ಕೇಕ್, ನಿಪ್ಪಟ್ಟು ಮಸಾಲ, ಪಾಪಡ್ ಮಸಾಲ, ವಿವಿಧ ಬಗೆಯ ಜ್ಯೂಸ್ ಗಳು, ವಿವಿಧ ಬಗೆಯ ಸಿಹಿ ತಿಂಡಿಗಳು, ಆಹಾರ ಹಬ್ಬವನ್ನು ಉಧ್ಘಾಟಿಸಿದ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ರವಿಕಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀಧರ್ ಮಾತನಾಡಿ ವಿದ್ಯಾರ್ಥಿಗಳು ತಾವೇ ಸ್ವತಃ ತಯಾರಿಸಿ ಮಾರಾಟ ಮಾಡುತ್ತಿರುವುದರಿಂದ ತಿಂಡಿತಿನಿಸುಗಳನ್ನು ಮಾಡುವ ಕುರಿತು ಆಸಕ್ತಿ ಬೆಳೆಸಿಕೊಳ್ಳಲು ಸಹಕಾರಿಯಾಗದೆ ಎಂದರು.

 ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಬೂಬಕರ್, ಲಯನ್ಸ್ ಕ್ಲಬ್ ನ ಮನೋರಮಾ ವಸಂತಕುಮಾರ್, ಮುಖ್ಯ ಶಿಕ್ಷಕಿ ಎ.ಸಿ.ಶೈಲಜಾ, ಹೆಚ್.ಆರ್. ಗಾಯತ್ರಿ, ಪೋಷಕರು, ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಿವಿಧ ರುಚಿಗಳನ್ನು ಸವಿದರು. ಕಡಿಮೆ ಹಣ ವ್ಯಯಿಸಿ ಮಾಡಿದ ಮಾರಾಟದಿಂದ ೧೫೦೦ ರೂ ಗಿಂತ ಹೆಚ್ಚಿನ ಹಣ ಗಳಿಸಿದ್ದು ಸಮಾಧಾನ ತಂದಿತು, ಮನೆಯಲ್ಲಿ ಅಮ್ಮಂದಿರಿಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡಲು ಅನುಕೂಲವಾಯಿತು ಎಂದು ಮರಾಟ ಮಾಡಿದ ವಿದ್ಯಾರ್ಥಿಗಳು ತಮ್ಮ ಸ್ನೇಹಿತರು ಮತ್ತು ಪೋಷಕರೊಂದಿಗೆ ಬಗೆ ಬಗೆಯ ತಿನಿಸುಗಳನ್ನು ಸವಿದು ಖುಷಿಪಟ್ಟರು.

Post a Comment

Previous Post Next Post