ಪ್ರತಿಭಟನೆಯೊಂದಿಗೆ ತಂಬಾಕು ಮಾರುಕಟ್ಟೆ ಆರಂಭ

ಗುಣಮಟ್ಟದ ಹೊಗೆಸೊಪ್ಪು ಕೆ.ಜಿ.ಗೆ 310 ರೂ. | ಹುಸಿಯಾದ ಬೆಳೆಗಾರರ ನಿರೀಕ್ಷೆ
ಅರಕಲಗೂಡು  : ತಾಲೂಕಿನ ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆ ಪ್ರಕ್ರಿಯೆ ಗುರುವಾರದಿಂದ ಪುನರಾರಂಭಗೊಂಡಿದೆ.ಬೆಲೆ ಸ್ಥಿರತೆ ಇಲ್ಲದೇ ರೈತರು ವರ್ತಕರು ಹಾಗೂ ಮಂಡಳಿ ನಡುವೆ ಹಗ್ಗ ಜಗ್ಗಾಟ ಕಂಡುಬಂದಿದ್ದು,ಉತ್ತಮ ಗುಣಮಟ್ಟದ ತಂಬಾಕು ಕೆ.ಜಿಗೆ 310ರೂ ಬೆಲೆ ದೊರೆತಿರುವುದನ್ನು ಖಂಡಿಸಿ ಬೆಳೆಗಾರರು ಕೆಲ ಕಾಲ ಪ್ರತಿಭಟನೆ ನಡೆಸಿದರು.

ಬಜೆಟ್ ಮುನ್ನಾ ಕೇಂದ್ರ ಸರ್ಕಾರ ತಂಬಾಕು ಮೇಲಿನ ಅಬಕಾರಿ ಸುಂಕ ಮತ್ತು ಜಿಎಸ್ಟಿ ದರ ಏರಿಕೆ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ತಂಬಾಕು ಖರೀದಿಸುವ ಕಂಪನಿಗಳು ತಂಬಾಕು ಹರಾಜು ಪ್ರಕ್ರಿಯೆಯನ್ನು ಕಳೆದ ಜನವರಿ 25ರಿಂದ ಸ್ಥಗಿತಗೊಳಿಸಿದ್ದರು. ಇದರಿಂದ ಮಾರುಕಟ್ಟೆಯಲ್ಲಿ ಹೊಗೆಸೊಪ್ಪು ಮಾರಾಟ ಮಾಡಲು ಮುಂದಾಗಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. 

ಬೆಳೆಗಾರರ ಸಂಕಷ್ಟವನ್ನು ಈ ಭಾಗದ ಶಾಸಕ ಮಂಜು ಅವರು ತಂಬಾಕು ಮಂಡಳಿ,ಐಟಿಸಿ ಕಂಪನಿ ಅಧಿಕಾರಿಗಳು ಮತ್ತು ರೈತರೊಂದಿಗೆ  ಸಮಾಲೋಚನೆ ನಡೆಸಿ,  ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಕೇಂದ್ರ ಸರಕಾರದ ಅಬಕಾರಿ ಸುಂಕವನ್ನು ಹಿಂಪಡೆದಿದೆ.ಈ ಸಲುವಾಗಿ ಗುರುವಾರದಿಂದ ತಂಬಾಕು ಖರೀದಿ ಪ್ರಕ್ರಿಯೆಯನ್ನು ವರ್ತಕರು ಮುಂದುವರಿಸಿದ್ದಾರೆ.

ಇಂದಿನ ಮಾರುಕಟ್ಟೆಯಲ್ಲಿ 11ಕಂಪನಿಗಳು ತಂಬಾಕು ಖರೀದಿಯಲ್ಲಿ ತೊಡಗಿದ್ದು,ಗುಣಮಟ್ಟದ ತಂಬಾಕು ಕೆ.ಜಿ  ಗೆ 311ರೂ ದೊರೆತಿದೆ.ಈ ಹಿಂದೆ ರೂ 321 ತನಕ ಬೆಲೆ ದೊರೆತಿದೆ.ಎರಡು ವಾರ ತಡವಾಗಿ ಪುನರಾರಂಭಗೊಂಡಿರುವ ಮಾರುಕಟ್ಟೆಯಲ್ಲಿ ಕೆ.ಜಿ.ತಂಬಾಕಿಗೆ 322ರಿಂದ 330ರೂ ತನಕ ಬೆಲೆ ದೊರೆಯಬಹುದೆಂಬ ಭರವಸೆಯಲ್ಲಿದ್ದ ಬೆಳೆಗಾರರಿಗೆ ದಿಡೀರ್ 10ರೂ ಎಂದಿನ ದರ ಇಳಿಕೆ ಕಂಡಿದ್ದನ್ನು ಕಂಡು ಮಾರುಕಟ್ಟೆಯನ್ನು ಬಂದ್ ಮಾಡಿ ಪ್ರತಿಭಟನೆಗೆ ಮುಂದಾದರು.ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ಬೆಳೆಗಾರರ ಸಂಘದ ಮುಖಂಡರು ಭಾಗಿಯಾಗಿ ಬೆಲೆ ಇಳಿಕೆಯನ್ನು ತೀವ್ರವಾಗಿ ಖಂಡಿಸಿದರು.
ಮಾರುಕಟ್ಟೆ ಈಗಾಗಲೇ ಸ್ಥಗಿತಗೊಂಡು ರೈತರಿಗೆ ಸಂಕಷ್ಟವನ್ನು ತಂದೊಡ್ಡಿದೆ.ಈಗ ಪುನಃ ಹೋರಾಟ ಮಾಡಿ ಮತ್ತೆ ಬಂದ್ ಮಾಡುವ ಬದಲು ಸ್ಥಿರವಾದ ಬೆಲೆ ನಿಗದಿಮಾಡಿ ಬೇಲ್‌ಗಳನ್ನು ಖರೀಸುವಂತೆ ಕೆಲವು ಬೆಳೆಗಾರರು ಮನವಿ ಮಾಡಿದ ಮೇರೆಗೆ ಹೋರಾಟವನ್ನು ತಾತ್ಕಲಿಕವಾಗಿ ಕೈಬಿಡಲಾಯಿತು.ಆದರೂ ಕೂಡ ಬೆಲೆ ಸ್ಥಿರತೆಯನ್ನು ಕಾಣಡದೇ ರೈತರು,ವರ್ತಕರು ಮತ್ತು ಮಂಡಳಿಯವರ ನಡುವಿನ ಹಗ್ಗಾ ಜಗ್ಗಾಟ ನಡುವೆಯೂ ಗುಣಮಟ್ಟದ ಕೆ.ಜಿ.ತಂಬಾಕು 310ರಿಂದ 311ರೂ,ಕನಿಷ್ಟದರ  ರೂ210ರೂ ಮತ್ತು ಸರಾಸರಿ 272.58ರೂ ದರ ದೊರೆಯಿತು.ಈ ಹಿಂದೆ ಸರಾಸರಿ ದರ 284.98ರೂ ದೊರೆತಿತ್ತು.ಸರಾಸರಿ ದರದಲ್ಲಿಯೂ ಕೂಡ 12.4ರೂ ಬೆಲೆ ಕಡಿತಗೊಂಡಿತು.

ಕಡಿಮೆ ಕಂಪನಿ ಭಾಗಿ : ಹಲವು ದಿನಗಳ ನಂತರ ಮಾರುಕಟ್ಟೆ ಆರಂಭಗೊಂಡಿದ್ದು,ಎಂದಿನಂತೆ 25 ಕಂಪನಿಗಳು ತಂಬಾಕು ಖರೀದಿಯಲ್ಲಿ ಭಾಗಿಯಾಗಬೇಕಿತ್ತು.ಇಂದು 11ಕಂಪನಿಗಳು ಮಾತ್ರ ಭಾಗಿಯಾಗಿವೆ.
ಹರಾಜು ಮಾರುಕಟ್ಟೆ-7ರಲ್ಲಿ ಒಟ್ಟು 521ಬೇಲ್‌ಗಳು ಬಂದಿದ್ದವು.ಅವುಗಳಲ್ಲಿ 411 ಸೋಲ್ಡ್ ಆಗಿವೆ.ಉತ್ತಮ ಗುಣಮಟ್ಟದ ಕೆ.ಜಿ.ತಂಬಾಕಿಗೆ ರೂ 311ರೂ,ಕನಿಷ್ಠ 210ರೂ ಮತ್ತು ಸರಾಸರಿ 272.58ರೂ ಬೆಲೆ ದೊರೆತಿದೆ.ಮುಂದಿನ ಮಾರುಕಟ್ಟೆಯಲ್ಲಿ ಉಳಿದ ಎಲ್ಲಾ ಕಂಪನಿಗಳು ಭಾಗಿಯಾಗುವ ನಿರೀಕ್ಷೆ ಇದೆ ಎಂದು ಹರಾಜು ಅಧೀಕ್ಷಕಿ ಸವಿತಾ ಅವರು ತಿಳಿಸಿದರು.
ರೈತರಿಗೆ ಬೆಲೆ ಸ್ಥಿರತೆ ಸಿಕ್ಕಿಲ್ಲ : ಇಂದಿನ ಮಾರುಕಟ್ಟೆಯಲ್ಲಿನ ಬೆಲೆಯನ್ನು ಕಂಡರೇ ಭಯವಾಗುತ್ತಿದೆ.ಇಲ್ಲಿ ಮಂಡಳಿ,ಕೇಂದ್ರ ಸರಕಾರ ನೆರವಿಗೆ ಬಂದಂತ್ತೆ ಕಾಣುತ್ತಿಲ್ಲ.ಅಬಕಾರಿ ಸುಂಕ,ಜಿಎಸ್ಪಿಗಳನ್ನು ಹಿಂದಕ್ಕೆ ಪಡೆದಿರುವ ಹೇಳಿಕೆಗಳು ಜಾರಿಗೆ ಬಂದಂತ್ತೆ ಕಾಣುತ್ತಿಲ್ಲ.45ಸಾವಿರ ಕೋಟಿ ರಪ್ತು ಸುಂಕವನ್ನು ತಂದುಕೊಡುವ ತಂಬಾಕು  ಬೆಳೆಗಾರರಿಗೆ ಬೆಲೆ ಸಿಗುತ್ತಿಲ್ಲ.ಮುಕ್ತ ವ್ಯಾಪಾರ ಮಾಡಿದರೇ ಬೆಳೆಗಾರರಿಗೆ ಬರೆ ಎಂದಿಗೂ ಇರಲ್ಲ.ವರ್ತಕರನ್ನು ಉದ್ದಾರ ಮಾಡಿ ರೈತರನ್ನು ಶೋಷಣೆಗೆ ತಳ್ಳುವ ಕೆಲಸ ಪ್ರತಿ ವರ್ಷವೂ ನಡೆಯುತ್ತಿದೆ ಎಂದು ರೈತ ಮುಖಂಡ ಸೀಬಳ್ಳಿ ಯೋಗಣ್ಣ ಅವರು ಆರೋಪಿಸಿದರು.

ಆತಂಕ ಬೇಡ :   ತಂಬಾಕು ಬೆಳೆಯ ಮೇಲೆ ವಿಧಿಸಿದ್ದ ಶೇ 18 ಅಬಕಾರಿ ಸುಂಕವನ್ನು ಕೇಂದ್ರ ಸಚಿವ ಎಚ್.ಡಿ.  ಕುಮಾರಸ್ವಾಮಿ ಅವರ ಸತತ ಪ್ರಯತ್ನದ ಫಲವಾಗಿ ರದ್ದುಗೊಂಡಿದ್ದು ಬೆಳೆಗಾರರು ಆತಂಕ ಪಡುವ  ಅಗತ್ಯವಿಲ್ಲ  ಎಂದು ಶಾಸಕ ಎ. ಮಂಜು ತಿಳಿಸಿದರು.  ದೂರವಾಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳೆಗಾರರ ಹಿತ ಕಾಪಾಡುವಲ್ಲಿ ಸಚಿವ ಕುಮಾರಸ್ವಾಮಿ ಅಪಾರ ಪರಿಶ್ರಮ ವಹಿಸಿದ್ದಾರೆ. ತಂಬಾಕು ಮಾರುಕಟ್ಟೆ ಪುನರಾರಂಭವಾಗಿದ್ದು ಬೆಳೆಗಾರರು ತಂಬಾಕು ಮಾರಾಟ ಮಾಡಬಹುದಾಗಿದೆ.  ಕಂಪನಿಗಳು  ಉತ್ತಮ ದರವನ್ನು ರೈತರಿಗೆ ನೀಡುವ ಮೂಲಕ ಬೆಳೆಗಾರರ ಹಿತವನ್ನು ಕಾಯುವಂತೆ ಕೋರಿದರು.

ಅಭಿನಂದನೆ : ತಂಬಾಕು ಬೆಳೆ ಮೇಲೆ ಕೇಂದ್ರ ಸರ್ಕಾರ ಮುಂಗಡ ಪತ್ರದಲ್ಲಿ ವಿಧಿಸಿದ್ದ ಶೇ 18 ಅಬಕಾರಿ ಸುಂಕವನ್ನು ರದ್ದುಪಡಿಸಿರುವ ಕ್ರಮವನ್ನು ತಂಬಾಕು ಬೆಳೆಗಾರರ ಸಂಘದ ಮುಖಂಡ ಕೆ.ಎಸ್. ಸಾಂಬಶಿವಪ್ಪ ಸ್ವಾಗತಿಸಿದ್ದಾರೆ.
ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ  ಅವರು,  ಶಾಸಕ  ಎ. ಮಂಜು ಅವರಲ್ಲಿ ತಂಬಾಕು ಬೆಳೆಗಾರರು ಅಳಲು ತೋಡಿಕೊಂಡಾಗ ಕಂಪನಿ  ಪ್ರತಿನಿಧಿಗಳ ಜತೆ ಬೆಳೆಗಾರರ ಸಮ್ಮುಖದಲ್ಲಿ ಮಾತು ಕತೆ ನಡೆಸಿದ್ದರು.  ಬಳಿಕ ಕೇಂದ್ರ ಸಚಿವ  ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಬೆಳೆಗಾರರ ಸಂಕಷ್ಟವನ್ನು ವಿವಿರಿಸಿ ಅಬಕಾರಿ ಸುಂಕ ರದ್ದು ಪಡಿಸುವಂತೆ ಮನವಿ ಮಾಡಿದ್ದರು. ಕುಮಾರಸ್ವಾಮಿ ಅವರು ವಿತ್ತ ಸಚಿವೆ ನಿರ್ಮಲಾ ಸಿತಾರಾಮನ್ ಅವರನ್ನು ಭೇಟಿ ಮಾಡಿ ಸುಂಕ ರದ್ದು ಪಡಿಸಲು ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾದರು. ಇದರಿಂದ ತಂಬಾಕು ಮಾರುಕಟ್ಟೆ ಮತ್ತೆ ಪ್ರಾರಂಭವಾಗಿದ್ದು ಇದರಿಂದ ಬೆಳೆಗಾರರಲ್ಲಿ ಮೂಡಿದ್ದ  ಆತಂಕ ದೂರಾಗಿದೆ. ಶಾಸಕ  ಎ. ಮಂಜು ಮತ್ತು  ಕೆಂದ್ರ ಸಚಿವ  ಎಚ್.ಡಿ. ಕುಮಾರಸ್ವಾಮಿ ಅವರನ್ನು ಅಭಿನಂದಿಸುವುದಾಗಿ ಹೆಳಿದರು. ತಂಬಾಕು ಬೆಳೆಗಾರರಾದ ನೇತ್ರಪಾಲ, ನರಸೇಗೌಡ, ಕಾಕೋಡನಹಳ್ಳಿ ಮಂಜು ಪತ್ರಿಕಾಗೋಷ್ಠಿಯಲ್ಲಿದ್ದರು. 

ಫೋಟೊ-ಕ್ಯಾಪ್ಸನ್-ಅರಕಲಗೂಡು ತಾಲೂಕು ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಗುರುವಾರ ಬೆಲೆ ಇಳಿಕೆಯನ್ನು ಖಂಡಿಸಿ ರೈತರು ಕೆಲ ಕಾಲ ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಪ್ರತಿಭಟಿಸಿದರು.

ಫೋಟೋ-ಕ್ಯಾಪ್ಸನ್-ಅರಕಲಗೂಡು ತಾಲೂಕು ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಬೇಲ್ಗಳನ್ನು ಖರೀದಿಸುತ್ತಿರುವ ಕಂಪನಿಗಳು.

ಫೋಟೋ-ಕ್ಯಾಪ್ಸನ್ -ತಂಬಾಕು ಬೆಳೆಗಾರರು ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸಚಿವ ರಾದ ನಿರ್ಮಲಾ ಸೀತಾ ರಾಮನ್ ಮತ್ತು ಹೆಚ್‌.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಮಂಜು ಅವರಿಗೆ ಅಭಿನಂದನೆ ಸಲ್ಲಿಸಿದರು.

Post a Comment

Previous Post Next Post