ಪ್ರತಿಯೊಬ್ಬ ನಾಗರಿಕನು ಕಡ್ಡಾಯವಾಗಿ ಮತ ಚಲಾಯಿಸಬೇಕು - News5Kannada

ಅರಕಲಗೂಡು : ತಾಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿನ ಸರಕಾರಿ ಶಾಲಾ ಆವರಣದಲ್ಲಿ ಮಕ್ಕಳ ಮನೆ ಆರಂಭಿಸುವ ಕುರಿತು ಪಂಚಾಯಿತಿ ಆಡಳಿತ ಮತ್ತು ಗ್ರಾಮಗಳ ಮುಖಂಡರು ಚಿಂತನೆ ನಡೆಸಿ ಕಾರ್ಯರೂಪಕ್ಕೆ ತರಬೇಕೆಂದು ಶಾಸಕ ಎ.ಮಂಜು ಸಲಹೆ ಮಾಡಿದರು.
ಭಾನುವಾರ ತಾಲೂಕಿನ ಮೋಕಲಿ ಗ್ರಾಪಂ ಕಚೇರಿಯ ನೂತನ ಸಭಾಂಗಣ ಉದ್ಘಾಟಿಸಿ ಮಾತನಾಡಿದ ಅವರು,ಈಗಾಗಲೇ ತಾಲೂಕಿನ 19ಗ್ರಾಮಗಳಲ್ಲಿನ ಸರಕಾರಿ ಶಾಲಾ ಆವರಣದಲ್ಲಿ ನಮ್ಮ ಕುಟುಂಬದ ವತಿಯಿಂದ ಮಕ್ಕಳ ಮನೆ ಪೂರ್ವ ಪ್ರಾಥಮಿಕ ಶಾಲೆಯನ್ನು ಅತ್ಯಂತ ಹೆಚ್ಚು ಗುಣಮಟ್ಟದಿಂದ ಆರಂಭಿಸಿದ ಪರಿಣಾಮ 500ಕ್ಕೂ ಅಧಿಕ ಸಂಖ್ಯೆಯ ಮಕ್ಕಳು ಸಕಲ ಸೌಕರ್ಯವುಳ್ಳ ಶಿಕ್ಷಣವನ್ನು ಪಡೆಯುತ್ತಿದ್ದಾರೆ.ಈ ಎಲ್ಲಾ ಮಕ್ಕಳ ಮನೆ ಶಾಲೆ ಸರಕಾರಿ ಶಾಲಾ ಆವರಣದಲ್ಲಿಯೇ ನಡೆಯುತ್ತಿದೆ.ಖಾಸಗಿ ಶಾಲೆಗಳಲ್ಲಿ ದೊರೆಯುವ ಶಿಕ್ಷಣಕ್ಕಿಂತ್ತ ಅತ್ಯುತ್ತಮ ಶಿಕ್ಷಣ ಬೋಧನೆ ಬಡ ಮಕ್ಕಳಿಗೆ ದೊರೆಯುತ್ತಿದೆ.ಕಳೆದ ಬಾರಿ ತಾಲೂಕಿಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಆಗಮಿಸಿದ ವೇಳೆ ನಮ್ಮ ಮಕ್ಕಳ ಮನೆ ಶಾಲೆಯ ವೀಕ್ಷಣೆ ಮತ್ತು ಸಕಲ ಶಿಕ್ಷಣ ಬೋಧನಾ ಕ್ರಮವನ್ನು ಮನವರಿಕೆ ಮಾಡಿಕೊಡಲಾಗಿತ್ತು.ಈ ಸಲುವಾಗಿ ರಾಜ್ಯ ಸರಕಾರ 1000 ಸಾವಿರ ಶಾಲೆಗಳನ್ನು ಆರಂಭಿಸಿದೆ ಎಂದು ಹೇಳಿದರು.
ಸರಕಾರಿ ಶಾಲೆಗಳಲ್ಲಿ ಸಕಲ ಸವಲತ್ತುಗಳು ಮಕ್ಕಳಿಗೆ ಉಚಿತವಾಗಿ ದೊರೆಯುತ್ತಿವೆ.ದೇವರ ಹಟ್ಟಿ ಕುಟುಂಬದಿಂದ ಪ್ರತಿ ಮಕ್ಕಳ ಮನೆಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ.ಸಾವಿರಾರೂ ಹಣವನ್ನು ಖಾಸಗಿ ಶಾಲೆಗೆ ದಂಡ ಕಟ್ಟುವ ಬದಲು ಸರಕಾರಿ ಶಾಲೆಗಳಲ್ಲಿ ಆರಂಭಗೊಂಡಿರುವ ಮಕ್ಕಳ ಮನೆ ಹಾಗು ಆಂಗ್ಲ ಮಾದ್ಯಮ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸೇರಿಸಿ ಸರಕಾರಿ ಶಾಲೆ ಉಳಿವು,ಉನ್ನತಿಗೆ ಸಹಕಾರ ನೀಡಬೇಕೆಂದು ಅವರು ಪೋಷಕರಲ್ಲಿ ಮನವಿ ಮಾಡಿದರು.
ಹೊಸದಾಗಿ ಅನುಷ್ಠಾನಕ್ಕೆ ಬರುವ ಉದ್ಯೋಗಖಾತ್ರಿ ಯೋಜನೆ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕಾದರೇ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೃಷಿಕರ ತೋಟಗಾರಿಕೆ,ಕೃಷಿ ಇತರೆ ಕೆಲಸಗಳನ್ನು ಆಯಾ ರೈತ ಕುಟುಂದವರಿಗೆ ನೀಡಿದರೇ ಪ್ರಯೋಜನಕ್ಕೆ ಬದಲಿದೆ.ಪ್ರತಿ ರೈತ ಕುಟುಂದಲ್ಲಿ ನಾಲ್ಕೈದು ಮಂದಿ ಇದ್ದೇ ಇರುತ್ತಾರೆ ಇವರಿಗೆ ಜಾಬ್ ಕಾರ್ಡ್ ನೀಡಿ ಯೋಜನೆಯನ್ನು ಯಶಸ್ವಿಯಾಗಿಸಬೇಕೆಂದು ಪಿಡಿಒ ಮಹಾದೇವಪ್ಪ ಗೆ ಸೂಚನೆ ನೀಡಿದರು.
ಮೋಕಲಿ ಗ್ರಾಪಂ ಪಿಡಿಒ ಮಹಾದೇವಪ್ಪ,ಆಡಳಿತ ಮಂಡಳಿ ಹಾಗೂ ಗುತ್ತಿಗೆದಾರರಿಂದ ಸಭಾಂಗಣ ಕಾಮಗಾರಿ ಉತ್ತಮವಾಗಿ ಮೂಡಿಬಂದಿದೆ.ಕಳೆದ ಐದು ವರ್ಗಗಳ ಅವಧಿಯಲ್ಲಿ ಸದಸ್ಯರಾಗಿ,ಅಧ್ಯಕ್ಷ,ಉಪಾಧ್ಯಕ್ಷರಾಗಿ ಸೇವೆ ಮಾಡುವ ಅವಕಾಶ ಸಿಕ್ಕಿದೆ.ಈ ಹಂತದಲ್ಲಿ ನೀವು ಕೈಗೊಂಡಿರುವ ಉತ್ತಮ ಕೆಲಸಗಳು ನಿಮ್ಮನ್ನು ಮುಂದಿನ ಅವಧಿಯ ಸದಸ್ಯರು,ಜನ ಸಾಮಾನ್ಯರು ಗುರುತಿಸಿ ಮೆಚ್ಚಿಗೆ ವ್ಯಕ್ತಪಡಿಸಿದಾಗ ಮಾತ್ರ ಸಾರ್ಥಕತೆ ಸಾಧ್ಯವಾಗುತ್ತದೆ.ಜನ ಪ್ರತಿನಿಧಿಗಳಿಗೆ ದೊರೆಯುವ ದೊಡ್ಡಬಹುಮಾನ ಇದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಕುಸುಮಾ,ಉಪಾಧ್ಯಕ್ಷ ಕುಮಾರ್,ಸದಸ್ಯ ಈರಾಜಿ,ಮುಖಂಡರಾದ ಮುತ್ತಿಗೆ ರಾಜೇಗೌಡ,ನರಸೇಗೌಡ,ವೀರಾಜ್,ಕೃಷ್ಣೇಗೌಡ,ದಿವಾಕರ್ ಇತರರು ಉಪಸ್ಥಿತರಿದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳು,ಚುನಾಯಿತ ಸದಸ್ಯರನ್ನು ಗೌರವಿಸಲಾಯಿತು.

Post a Comment

Previous Post Next Post