Arkalgud : ಮಕ್ಕಳ ಮನೆ ಶಾಲೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ

ಅರಕಲಗೂಡು : ತಾಲ್ಲೂಕಿನ  ಹನ್ಯಾಳು, ಲಕ್ಕೂರು ಹಾಗೂ ಮಧುರನಹಳ್ಳಿ ಸರ್ಕಾರಿ ಶಾಲೆಗಳಲ್ಲಿ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಹಾಸನ ಹಾಗೂ ಹಿರಿಯ ವಿದ್ಯಾರ್ಥಿ ಬಳಗ ಹನ್ಯಾಳು ರವರ ವತಿಯಿಂದ ಮಕ್ಕಳ ಮನೆ (LKG & UKG), ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸುಮಾರು 400 ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಹಲ್ಲಿನ ತಪಾಸಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಈ ಸಂದರ್ಭದಲ್ಲಿ ದಂತ ವೈದ್ಯರು ಮಕ್ಕಳಿಗೆ ಹಲ್ಲಿನ ಆರೈಕೆ, ದೈನಂದಿನ ಸ್ವಚ್ಛತೆ ಹಾಗೂ ಸರಿಯಾದ ರೀತಿಯಲ್ಲಿ ಬ್ರಷ್ ಮಾಡುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಿದರು. ಮಕ್ಕಳಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಸಲುವಾಗಿ ಸರಳ ಹಾಗೂ ಮನರಂಜನಾತ್ಮಕ ರೀತಿಯಲ್ಲಿ ಮಾರ್ಗದರ್ಶನ ನೀಡಲಾಯಿತು.

ಮಕ್ಕಳು ಉತ್ಸಾಹದಿಂದ ಭಾಗವಹಿಸಿ ತಪಾಸಣೆ ಮಾಡಿಸಿಕೊಂಡರು.
ಕಾರ್ಯಕ್ರಮದಲ್ಲಿ  ಡಾ. ಶ್ರುತಿ ಹರ್ಷ, ಡಾ. ರಮ್ಯ ವೆಂಕಟೇಶ್, ಡಾ. ವೈಷ್ಣವಿ ಪಿ, ಡಾ. ಕಾವ್ಯಶ್ರೀ , ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರಾದ ರವಿಕುಮಾರ್, ಮಂಜುನಾಥ್, ನಾಗರಾಜ್, ವೆಂಕಟೇಶ್ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.

ಮಕ್ಕಳ ಮನೆ ಶಿಕ್ಷಕಿಯರಾದ ಮಂಜುಳಾ, ರಕ್ಷಿತಾ, ಗೌರಮ್ಮ, ಅಂಗನವಾಡಿ ಶಿಕ್ಷಕಿಯರಾದ ನಂದಿನಿ, ಶಶಿ, ಅಡುಗೆ ಸಿಬ್ಬಂದಿಗಳು ಹಾಗೂ ಎಸ್ ಡಿ ಎಂ ಸಿ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಹಿರಿಯ ವಿದ್ಯಾರ್ಥಿ ಬಳಗ, ಹನ್ಯಾಳು ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಿದ ಡಾ. ಅಶೋಕ್ ಹನ್ಯಾಳ್ ಹಾಗೂ ಸಂತೋಷ್ ಹೆಚ್.ಪಿ. ರವರ ಈ ಸೇವಾ ಕಾರ್ಯಕ್ಕೆ ಪೋಷಕರು ಮತ್ತು ಗ್ರಾಮಸ್ಥರು ಹೃತ್ಪೂರ್ವಕ ಮೆಚ್ಚುಗೆ ವ್ಯಕ್ತಪಡಿಸಿದರು.




Post a Comment

Previous Post Next Post