ಅರಕಲಗೂಡುನಲ್ಲಿ ನಡೆದ ರಾಷ್ಟ್ರಮಟ್ಟದ ಓಪನ್ ಕರಾಟೆ ಪಂದ್ಯಾವಳಿಯಲ್ಲಿ ಎವಿಕೆ ಗ್ಲೋಬಲ್ ಅಕಾಡೆಮಿ ವಿದ್ಯಾರ್ಥಿಗಳು ಸಮಗ್ರ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
ಪಂದ್ಯಾವಳಿಯಲ್ಲಿ ಅಕಾಡೆಮಿಯ ಲೇಖನ, ನಬಿಯ, ಎ.ಕೆ. ಯತ್ವಿಕ್, ಕೆ. ಎಸ್. ಯಶೋಧ, ಎಚ್.ಎ. ಪೃತ್ವಿಕ್, ನಕುಲ್ ರಾಜ್ ಹಾಗೂ ಅತಿಯಾ ಹರ್ಮೈನ್ ಉತ್ತಮ ಪ್ರದರ್ಶನ ನೀಡಿ ಪದಕಗಳನ್ನು ತಮ್ಮದಾಗಿಸಿಕೊಂಡರು.
ವಿದ್ಯಾರ್ಥಿಗಳ ಸಾಧನೆಯನ್ನು ಶಾಲಾ ಅಧ್ಯಕ್ಷ ಎ.ಜಿ. ರಾಮನಾಥ್, ಉಪಾಧ್ಯಕ್ಷ ಶೇಷಾದ್ರಿ, ಕಾರ್ಯದರ್ಶಿ ನಯಜ್ ಪಾಷಾ, ಪ್ರಾಂಶುಪಾಲ ಸುಲ್ತಾನ ಬಾನು, ಕರಾಟೆ ತರಬೇತು ದಾರ ಸೆನ್ಸಾಯ್ ರಮೇಶ್ ಹಾಗೂ ಶಿಕ್ಷಕ-ಶಿಕ್ಷಕಿಯರು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಅಭಿನಂದಿಸಿ, ಮಾಡಲು ಪ್ರೋತ್ಸಾಹಿಸಿದರು.
Tags
ಅರಕಲಗೂಡು