ಫೆ.16 ರಂದು ಕೋಟೆ ಪುರಾಣ ಪ್ರಸಿದ್ಧ ಅಮೃತೇಶ್ವರಸ್ವಾಮಿ ರಥೋತ್ಸವ

ಅರಕಲಗೂಡು:  ಪಟ್ಟಣದ ಕೋಟೆ ಪುರಾಣ ಪ್ರಸಿದ್ದ ಅಮೃತೇಶ್ವರಸ್ವಾಮಿ ರಥೋತ್ಸವವು ಫೆ 16 ರಂದು ನಡೆಯಲಿದ್ದು  ವಿವಿಧ ಧಾರ್ಮಿಕ ಕಾರ್ಯಗಳಿಗೆ ಗುರುವಾರ ಚಾಲನೆ ದೊರೆಯಲಿದೆ. 
ಫೆ 12  ಬೆಳಿಗ್ಗೆ ಅಭಿಷೇಕ, ಸಂಜೆ ಅಂಕುರಾರ್ಪಣೆ, ರಾತ್ರಿ ನಂದಿವಾಹನೋತ್ಸವ. ಫೆ 13 ರಾತ್ರಿ ಶೇಷ ವಾಹನೋತ್ಸವ, ಫೆ 14 ರಾತ್ರಿ ಉತ್ಸವ, ಫೆ 15 ಮಹಾಶಿವರಾತ್ರಿ ಪ್ರಯುಕ್ತ ಬೆಳಿಗ್ಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ. ಸಂಜೆ ಗಿರಿಜಾ ಕಲ್ಯಾಣ, ರಾತ್ರಿ ಉತ್ಸವ. ಫೆ 16 ಬೆಳಿಗ್ಗೆ 9.30ಕ್ಕೆ ಕೃಷ್ಣ ಗಂಧೋತ್ಸವ,  10.30ಕ್ಕೆ ಮಹಾರಥೋತ್ಸವ, ರಾತ್ರಿ ಶಾಂತೋತ್ಸವ. ಫೆ 17 ರಾತ್ರಿ ಶಯನೋತ್ಸವ, ಫೆ 18 ಬೆಳಿಗ್ಗೆ ಅವಬೃತ ವಸಂತಸೇವೆ, ರಾತ್ರಿ ಉತ್ಸವ ನಡೆಯಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

Post a Comment

Previous Post Next Post