ಅರಕಲಗೂಡು : ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಸ್ವಾಮೀಗೌಡ ಅವರನ್ನು ದುರ್ನಡೆತೆಯ ಆರೋಪದ ಮೇರೆಗೆ ಸರಕಾರಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.
ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ನಿರೀಕ್ಷಕ ಜಯರಾಂ ಎಂಬುವವರೊಂದಿಗೆ ಮೊಬೈಲ್ ಪೋನ್ ಮುಖಾಂತರ ನಡೆಸಿರುವ ಸಂಭಾಷಣೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಹಾಗೂ ಅಸಂವಿಧಾನಾತ್ಮಕ ಪದಗಳನ್ನು ಉಪಯೋಗಿಸಿ ಜಾತಿ ನಿಂದನೆ ಮಾಡಿರುವ ಕುರಿತು ಅರಕಲಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಜನಪರ ಚಳುವಳಿಗಳ ಒಕ್ಕೂಟ ಮುಖಂಡರು ಡಾ.ಸ್ವಾಮೀಗೌಡ ರ ವಿರುದ್ಧ ಕ್ರಮ ಕೈಗೊಳ್ಳುವ ಮನವಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳಿಗೆ ಸಲ್ಲಿಸಿದ್ದರು.ಇದರ ಅನ್ವಯ ಸದರಿ ವೈದ್ಯರ ವಿರುದ್ಧದ ಆರೋಪದ ಬಗ್ಗೆ ಇಲಾಖಾ ವಿಚಾರಣೆ ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸರಕಾರಿ ಸೇವೆಯಿಂದ ಅಮಾನತುಗೊಳಿಸಿ ಹಾಗೂ ಜೀವನಾಂಶ ಭತ್ಯೆ ಪಡೆಯುವ ಸಲುವಾಗಿ ಲೀನ್ ಅನ್ನು ಸಾರ್ವಜನಿಕ ಆಸ್ಪತ್ರೆ ಕಡೂರು,ಚಿಕ್ಕಮಗಳೂರು ಜಿಲ್ಲೆ.ಖಾಲಿ ಇರುವ ಹುದ್ದೆಗೆ ಸ್ಥಳಾಂತರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆಯುಕ್ತರಾದ ಶಿವಕುಮಾರ್,ಕೆ.ಬಿ ಅವರು ಆದೇಶಿಸಿದ್ದಾರೆ.
Tags
ಅರಕಲಗೂಡು