ಅರಕಲಗೂಡು : ಹೊಯ್ಸಳ ವೈಭವ ಕಾರ್ಯಕ್ರಮ ಜನವರಿ 26 ರ ಗಣರಾಜ್ಯೋತ್ಸವದಂದು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಸಾವಿರ ಮಕ್ಕಳು ವಿವಿಧ ಬಗೆಯ ವೇಶದಾರಿಗಳಾಗಿ ಭಾಗವಹಿಸುತ್ತಿದ್ದು ಇದರೊಂದಿಗೆ ವಿಧ್ಯಾರ್ಥಿಗಳ ಪಥಸಂಚಲನ ಹಾಗೂ ವಿವಿಧ ಸಾಂಸ್ಕೃತಿಕ ಗೊಂಬೆಗಳ ಅಲಂಕಾರಿಕ ರಥದ ಜೊತೆ ಮೆರವಣಿಗೆ ನಡೆಯಲಿದೆ.
ಈ ಕಾರ್ಯಕ್ರಮವು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಬೆಳಗ್ಗೆ 7.30 ಕ್ಕೆ ಚಾಲನೆಗೊಂಡು ಬಾಲಕರ ಪಧವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದ ತನಕ ಸಾಗಲಿದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕ್ಷೇತ್ರ ಶಿಕ್ಷಣಾದಿಕಾರಿ ನಾರಾಯಣ್ ಮನವಿ ಮಾಡಿದ್ದಾರೆ.
@News5Kannada
Ravi Dummi
Tags
ಅರಕಲಗೂಡು