ಹೊನ್ನವಳ್ಳಿ ಫಾರೆಸ್ಟ್'ನಲ್ಲಿ ಅನುಮಾನಸ್ಪದವಾಗಿ ವ್ಯಕ್ತಿ ಸಾವು, ಮೂವರನ್ನ ವಶಕ್ಕೆ ಪಡೆದ ಪೊಲೀಸರು

ಅರಕಲಗೂಡು : ತಾಲೂಕಿನ ಹೊನ್ನವಳ್ಳಿ ಗ್ರಾಮದ ನಿವಾಸಿ ಮರಿದೇವೇಗೌಡ (65) ಎಂಬ ವ್ಯಕ್ತಿ ಹೊನ್ನವಳ್ಳಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಮೃತ ದೇಹ ಪತ್ತೆಯಾಗಿದೆ.

ಸಾವಿಗೀಡಾಗಿರುವ ವ್ಯಕ್ತಿಯ ಕುತ್ತಿಗೆ, ತಲೆ, ಹಾಗೂ ಬೆನ್ನಿನಲ್ಲಿ ಗಾಯಗಳಾಗಿರುವುದರಿಂದ ಅನೇಕ ಸಂಶಯಕ್ಕೆ ಕಾರಣವಾಗಿದೆ. ಶವವನ್ನ ಅರಕಲಗೂಡು ಪೊಲೀಸರು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದಾರೆ. 

ಹೊನ್ನವಳ್ಳಿ ಗ್ರಾಮದ ಮರಿದೇವೇಗೌಡನನ್ನು ಬುಧವಾರ ಸಂಜೆ ಸೋಮಶೇಖರ, ಕಾಳೇಗೌಡ, ಕೃಷ್ಣೇಗೌಡ ಎಂಬುವವರು ಕಾರಿನಲ್ಲಿ ಕರೆದುಕೊಂಡು ಹೋಗಿದ್ದರೂ ಎಂಬ ಶಂಖೆಯ ಮೇರೆಗೆ ಇವರುಗಳನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ. ಮರಿದೇವೇಗೌಡನ ಮಗ ಗೀರೀಶ ತನ್ನ ತಂದೆಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಸಾವನಪ್ಪಿರುವ ವ್ಯಕ್ತಿಯು ಪೊಲೀಸರು ವಶಕ್ಕೆ ಪಡೆದಿರುವ ಸೋಮಶೇಖರನ ಹೋಟೆಲ್‌ನಲ್ಲಿ ಹಲವಾರು ವರ್ಷಗಳು ಅಡುಗೆ ಬಟ್ಟನಾಗಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆಯೂ ತಿಳಿದು ಬಂದಿದ್ದು, ಈ ಎಲ್ಲಾ ಪ್ರಕರಣಕ್ಕೆ ತಿರುವು ಸಿಕ್ಕಿದೆ.

@News5Kannada 

Post a Comment

Previous Post Next Post