ಅರಕಲಗೂಡು : ತಾಲ್ಲೂಕಿನ ತಟ್ಟೆಕೆರೆ ಗ್ರಾಮದ ಬಳಿ ಒಣ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅರಕಲಗೂಡು ಪಟ್ಟಣದ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಪಿಎಸ್ಐ ಕಾವ್ಯ ಸಿ.ಆರ್ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಮುನಿಪ್ ಪಾರ್ಟಿ ಗ್ರಾಮದ ಅಭಿಷೇಕ್ (24) ಎಂಬಾತನನ್ನು ಬಂಧಿಸಿ, ಈತನಿಂದ 1 ಕೆಜಿ 83 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ದಾಳಿಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸತೀಶ್, ಅನೀಲ್ ಕುಮಾರ್ , ಕುಮಾರ, ಛಾಯಪತಿ ಭಾಗವಹಿಸಿದ್ದರು.
Tags
ಅರಕಲಗೂಡು