ಅರಕಲಗೂಡು : ತಾಲ್ಲೂಕಿನ ಮುದ್ದನಹಳ್ಳಿಯಲ್ಲಿನ ಶ್ರೀ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ ವತಿಯಿಂದ ಜ. 29ರಂದು ಉಚಿತ ಎಚ್.ಪಿ.ವಿ ಚುಚ್ಚುಮದ್ದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ನ್ಯೂಸ್ 5 ಸುದ್ದಿ ವಾಹಿನಿ'ಯೊಂದಿಗೆ ಮಾತನಾಡಿ, "ಜ. 17ರಂದು ಎಚ್.ಪಿ.ವಿ. (ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಲು) ಚುಚ್ಚುಮದ್ದು ಕಾರ್ಯಕ್ರಮ ಹಮ್ಮಿಕೊಂಡು 200ಕ್ಕೂ ಹೆಚ್ಚು ಮಕ್ಕಳಿಗೆ ಚುಚ್ಚುಮದ್ದು ನೀಡಲಾಗಿತ್ತು. ಅಂದು ಅಂದಾಜು 600 ಹೆಣ್ಣು ಮಕ್ಕಳು ಚುಚ್ಚುಮದ್ದನ್ನು ತೆಗೆದುಕೊಳ್ಳಲು ಹೆಚ್ಚುವರಿಯಾಗಿ ನೋಂದಾಯಿಸಿಕೊಂಡಿದ್ದರು. ಎಲ್ಲರಿಗೂ 29ರಂದು ಬೆಳಗ್ಗೆ 7.30ಕ್ಕೆಶ್ರೀ ಅರಸೀಕಟ್ಟೆ ಅಮ್ಮನವರ ದೇವಾಲಯದ ಸನಿಹವಿರುವ ಹೇಮಾವತಿ ಸಭಾಂಗಣದ ಬಳಿ ಚುಚ್ಚುಮದ್ದನ್ನು ನೀಡಲಾಗುವುದು,'' ಎಂದರು.
'ತಾಲೂಕಿನಾದ್ಯಂತ ಆಸಕ್ತಿಯುಳ್ಳ ಎಲ್ಲಾ 9 ವರ್ಷದಿಂದ 14 ವರ್ಷದವರೆಗಿನ ಹೆಣ್ಣುಮಕ್ಕಳಿಗೆ ಎಚ್.ಪಿ.ವಿ. ಚುಚ್ಚುಮದ್ದು ನೀಡಲಾಗುತ್ತಿದ್ದು, ಇನ್ನೆರ್ ವೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರಕಾರ ಸಹಕಾರ ನೀಡಲಿದೆ. ಆಸಕ್ತಿಯುಳ್ಳವರು ಜ.29ರಂದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನೋಂದಣಿಗೆ ವಯಸ್ಸಿನ ದೃಢೀಕರಣಕ್ಕಾಗಿ ಯಾವುದಾದರೂ ಒಂದು ದಾಖಲೆ ಪ್ರತಿಯನ್ನು ಕಡ್ಡಾಯವಾಗಿ ತರಬೇಕು,'' ಎಂದು ತಿಳಿಸಿದರು.
@News5Kannada
Ravi Dummi
Tags
ಅರಕಲಗೂಡು