ಅರಕಲಗೂಡು : ಶರೀರದ ಮುಖ್ಯ ಅಂಗಾಂಗಗಳಲ್ಲಿ ಒಂದಾದ ಕಣ್ಣುಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ಮನುಷ್ಯನ ಆಧ್ಯ ಕರ್ತವ್ಯ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಪುಷ್ಪಲತಾ ತಿಳಿಸಿದರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಹಾಸನ ,ತಾಲೂಕು ಪಂಚಾಯಿತಿ ಅರಕಲಗೂಡು, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಸೋಮವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಸಿಬಿರ ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯ ಇಲಾಖೆಯಿಂದ ಅಂದತ್ವ ನಿವಾರಣೆಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಅದರ ಜೊತೆಯಲ್ಲಿ ವಿಕಲಚೇತನ ಕಲ್ಯಾಣ ಇಲಾಖೆಯ ಈ ಶಿಬಿರ ನಡೆಸುತ್ತಿರುವುದು ತುಂಬಾ ಸಂತೋಷ ಎಂದು ಹೇಳಿದರು.
ಸಭೆಯಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಎಮ್ ದೀಪಕ್, ಹಿರಿಯ ನೇತ್ರತಜ್ಞ ವೈದ್ಯ ಡಾ. ಶ್ರೀಧರ್, ಸಹಾಯಕ ಆಡಳಿತ ಅಧಿಕಾರಿ ಶ್ರೀಕಾಂತ್,ಕಾರ್ಯಕರ್ತರಾದ ಮಂಜುನಾಥ್,ಚಂದ್ರಶೇಖರ್,ಜಿಜಿ ಕೇಶವ ಮಾತನಾಡಿದರು.
@News5Kannada
Ravi Dummi
Tags
ಅರಕಲಗೂಡು