'ಅರಕಲಗೂಡಿನ ಟೈಲರ್ ಕೃಷ್ಣಪ್ಪ' ಹಾಸನ ಜಿಲ್ಲಾ ಟೈಲರ್ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆ

ಅರಕಲಗೂಡು : ಸಿದ್ದ ಉಡುಪುಗಳು ನೇರವಾಗಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಹಿನ್ನೆಲೆ ಟೈಲರ್ ವೃತ್ತಿಯನ್ನೇ ಅವಲಂಭಿಸಿರುವವರ ಬದುಕು ಸಂಕಷ್ಟದಿಂದ ಕೂಡಿದೆ.ಇವರ ನೆರವಿಗೆ ಸರ್ಕಾರ ಯೋಜನೆ ರೂಪಿಸಬೇಕೆಂದು ಹಾಸನ ಜಿಲ್ಲಾ ಟೈಲರ್ ಅಸೋಸಿಯೇಷನ್ ಅಧ್ಯಕ್ಷ ಎ.ಎ.ಕೃಷ್ಣಪ್ಪ ಒತ್ತಾಯಿಸಿದರು.

ಇತ್ತೀಚೆಗೆ ನಡೆದ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್(ಕೆ ಎಸ್ ಟಿ ಎ) ನ ಸರ್ವ ಸದಸ್ಯರ ಸಭೆಯಲ್ಲಿ ನೂತನವಾಗಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಮಾತನಾಡಿದ ಅವರು,ಹೊಸದಾಗಿ ಪ್ಯಾಂಟ್,ಶರ್ಟ್ ಹೊಲಿಸುವ ಹಣಕ್ಕೆ ಮಾರುಕಟ್ಟೆಯಲ್ಲಿ ಒಂದು ಜತೆ ಉಡುಪು ಸಿಗುತ್ತಿವೆ.ಬಟ್ಟೆ ಹೊಲಿಯುವ ವೆಚ್ಚ ದುಬಾರಿಯಾಗಿದೆ.ಕೆಲವರಿಗೆ ವಾರದಲ್ಲಿ ಎರಡು ಜತೆ ಹೊಸ ಬಟ್ಟೆ ಹೊಲಿಗೆ ಸಿಕ್ಕರೇ,ಮತ್ತೆ ಕೆಲವರಿಗೆ ಅದು ಸಹ ಇಲ್ಲವಾಗಿದೆ.ಈ ವೃತ್ತಿಯನ್ನೆ ನಂಬಿಕೊAಡಿರುವವರ ಜೀವನ ತುಂಬಾ ಸಂಕಷ್ಟಕ್ಕೆ ಸಿಲುಕಿದೆ.ಟೈಲರ್ ವೃತ್ತಿಬಾಂಧವರಿಗೂ ಸಹ ಆರ್ಥಿಕ ನೆರವು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ,ರಾಜ್ಯ ಸರಕಾರಗಳು ಗಮನರಿಸಬೇಕೆಂದು ಅವರು ಮನವಿ ಮಾಡಿದರು.

ಸಭೆಯಲ್ಲಿ ರಾಜ್ಯ ಸಮಿತಿಯ ಅಧ್ಯಕ್ಷ ನಾರಾಯಣ ಉಲ್ಲಾಳ,ಉಪಾಧ್ಯಕ್ಷ ರೆಹಮಾನ್ ಶರೀಫ್, ರಾಜ್ಯ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಎಚ್ ಮಲ್ಲಿಕಾರ್ಜುನ, ನಿಕಟಪೂರ್ವ ಅಧ್ಯಕ್ಷ ಲಕ್ಷ್ಮಣ್ ರಾವ್,ಸತ್ಯನಾರಾಯಣರವರು ,ಕೆ ಎ ಶಂಕರೇಗೌಡ ಹಾಜರಿದ್ದರು.

ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. 
ಪ್ರಧಾನ ಕಾರ್ಯದರ್ಶಿಯಾಗಿ ವೆಂಕಟೇಶ್, ಹಾಗೂ ಖಜಾಂಚಿಯಾಗಿ ಕೆಎಲ್ ರೇವಣ್ಣ,ಉಪಾಧ್ಯಕ್ಷರಾಗಿ ಧರಣೇಶ್,ಜೆ ಸಂತೋಷ್, ಶ್ರೀಮತಿ ರೇಣುಕಾ ದಿಡಗ ಇವರು ಆಯ್ಕೆಯಾದರು.

Post a Comment

Previous Post Next Post