ಎಡಬಿಡದೆ ಸುರಿಯುತ್ತಿರುವ ಮಳೆ:ಜನಜೀವನ ಅಸ್ತವ್ಯಸ್ತ

ಅರಕಲಗೂಡು : ತಾಲೂಕಿನಾದ್ಯಂತ ಕಳೆದ 5-6 ದಿನಗಳಿಂದ ಮಳೆ ಸುರಿಯುತ್ತಿದ್ದು,ಕಳೆದ ಮೂರು ದಿನಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿದೆ.ಶನಿವಾರ ಹಾಗೂ ಭಾನುವಾರಗಳಂದು ಮಳೆಯ ತೀವ್ರತೆ ಹೆಚ್ಚಾಗಿದ್ದು,ಶೀತಗಾಳಿಯ ಪರಿಣಾಮ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಾರಂಭಿಸಿದೆ.ನಿರಂತರ ಮಳೆಯಿಂದ ಜನರ ದೈನಂದಿನ ಚಟುವಟಿಕೆಗಳಲ್ಲಿ ವ್ಯತ್ಯಾಸ ಉಂಟಾಗಿದೆ.ಈ ನಡುವೆ ಶನಿವಾರ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಗಣನೀಯವಾಗಿ ಕಡಿಮೆಯಾಗಿತ್ತು.ಜನರೂ ಸಹ ಮನೆಯಿಂದ ಹೊರಬರಲಾಗದ ಪರಿಸ್ಥಿತಿ ಇದೆ.
     ಶೀತಗಾಳಿಯ ಪರಿಣಾಮ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾಗಿ,ಶೀತ,ನೆಗಡಿ ಹಾಗೂ ಜ್ವರದಿಂದ ಬಳಲುವಂತಾಗಿದೆ.
 ತಾಲ್ಲೂಕು ಆಡಳಿತದ ವಿರುದ್ದ ಆಕ್ರೋಶ:ಬೇಡವಾದ ಸಂದರ್ಭಗಳಲ್ಲಿ ರಜೆ ನೀಡುವ ಜಿಲ್ಲಾಡಳಿತ ಮಳೆಯ ಮುನ್ಸೂಚನೆ ಇದ್ದರೂ ಇಲ್ಲವೇ ಮಳೆ ನಿರಂತರ ಸುರಿಯುತ್ತಿದ್ದರೂ ಅಂಗನವಾಡಿ,ಶಾಲೆಗಳಿಗೆ ರಜೆ ನೀಡಲು ಹಿಂದು ಮುಂದು ನೋಡುತ್ತದೆ. ಇದಕ್ಕೆ ತಾಲೂಕು ಹಂತದಿಂದ ಜಿಲ್ಲೆಗೆ ಸರಿಯಾದ ವರದಿ ತಲುಪದಿರುವುದೇ ಕಾರಣ.ಇಂತಹ ಸಂದರ್ಭದಲ್ಲಿ ಯಾದರೂ ತಾಲೂಕು ಮಟ್ಟದ ಅಧಿಕಾರಿಗಳು ಸ್ವಸ್ಥಾನದಲ್ಲಿದ್ದು ಪರಿಸ್ಥಿತಿ ಅವಲೋಕಿಸಿ ವರದಿ ನೀಡುವಂತಾಗಬೇಕು ಅಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Post a Comment

Previous Post Next Post