ಹಣ ದುರುಪಯೋಗ : ಕೊಣನೂರು ಗ್ರಾ.ಪಂ. ಕಾರ್ಯದರ್ಶಿ ಬಿ.ಎನ್.ಭುವನ್ ಸಸ್ಪೆಂಡ್

ಅರಕಲಗೂಡು : ತಾಲ್ಲೂಕಿನ ಕೊಣನೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಗಂಗೂರು ಪ್ರಭಾರ ಪಿಡಿಒ) ಬಿ.ಎನ್.ಭುವನ್ ಅವರನ್ನು ಅಮಾನತ್ತು ಮಾಡಲಾಗಿದೆ. 

15ನೇ ಹಣಕಾಸು, ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲ, ಸಿಬ್ಬಂದಿ ವೇತನ ಖಾತೆ, ಗ್ರಾಮ ವಿಕಾಸ ಯೋಜನೆಯಲ್ಲಿ ಒಟ್ಟು ರೂ. 1,49,78,753 (ಆಕ್ಷೇಪಣೆ ರೂ. 97,58,603 ವಸೂಲಾತಿ ರೂ.52,20,150)ಗಳನ್ನು ನಿಯಮಬಾಹಿರವಾಗಿ ಅವರು ದುರುಪಯೋಗಪಡಿಸಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1957ರ ನಿಯಮ 10(D)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತು ಮಾಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆದೇಶಿಸಿದ್ದಾರೆ.

ಅಮಾನತ್ತುಗೊಂಡಿರುವ ಸದರಿ ಗ್ರಾಮ ಪಂಚಾಯಿತಿ ಕಾವ್ಯದರ್ಶಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯಿಲ್ಲದೆ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ. ಕೆ.ಸಿ.ಎಸ್.ಆರ್. ನಿಯಮ 98ರಂತೆ ಅಮಾನತ್ತಿನ ಅವಧಿಯಲ್ಲಿ ಜೀವನಾಂಶ ಭತ್ಯೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಸರ್ಕಾರದ ಹಣವನ್ನು ದುರುಪಯೋಗ ಮಾಡಿದ ಪ್ರಕರಣಗಳಲ್ಲಿ ಯಾರೇ ಆಗಲಿ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Post a Comment

Previous Post Next Post