ಪ್ರಶಸ್ತಿ ಪತ್ರದೊಂದಿಗೆ ಬಾಲ ಪತ್ರಿಭೆ ಎಸ್.ಎಸ್. ತ್ರಿಶಾ.


ಅರಕಲಗೂಡು: ಪಟ್ಟಣದ ಬಿಜಿಎಸ್ ಪಬ್ಲಿಕ್ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಎಸ್.ಎಸ್. ತ್ರಿಶಾ ವಿಜ್ಞಾನದಲ್ಲಿ ಸೃಜನಾತ್ಮಕ ಆವಿಷ್ಕಾರ ಸರ್ಥೆಯಲ್ಲಿ ಗೆದ್ದು ಪ್ರಶಸ್ತಿ ಗಳಿಸಿದ್ದಾರೆ.

ಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಪಂ, ರಾಜ್ಯ ಬಾಲ ಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಾಸನದ ಅಂಬೇಡ್ಕರ್ ಭವನದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್.ಎಸ್. ತ್ರಿಶಾ ಅವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಪ್ರಶಸ್ತಿ ಪಡೆದ ಬಾಲ ಪತ್ರಿಭೆ ತ್ರಿಶಾ ಅವರನ್ನು ಮುಖ್ಯ ಶಿಕ್ಷಕಿ ದುಲ್ಸಿನ್ ಹಾಗೂ ಸಹ ಶಿಕ್ಷಕರು ಅಭಿನಂದಿಸಿದ್ದಾರೆ.

Post a Comment

Previous Post Next Post