ಅರಕಲಗೂಡು : ಜಾತಿ ಮತಗಳ ಬೇಧವಿಲ್ಲದೆ ಅನ್ನ ದಾಸೋಹ ಜತೆಗೆ ಸಾಮಾನ್ಯ ವರ್ಗದ ಮಕ್ಕಳಿಗೆ ಶಿಕ್ಷಣ ನೀಡಿದ ತ್ರಿವಿದ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಅವರು ವಿಶ್ವವೇ ಮೆಚ್ಚುವ ಕಾಯಕ ಜೀವಿ ಎಂದು ಶಾಸಕ ಎ. ಮಂಜು ಬಣ್ಣಿಸಿದರು.
ಪಟ್ಟಣದ ಕೊತ್ತಲು ಗಣಪತಿ ದೇವಾಲಯ ಆವರಣದಲ್ಲಿ ವೀರಶೈವ ಸಮಾಜದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆದು ಉಳ್ಳವರಿಗೆ ಶಿಕ್ಷಣ ಕೊಡಿಸುವ ಮಂದಿಯೇ ಹೆಚ್ಚು. ಆದರೆ ಶ್ರೀಗಳು ಎಲ್ಲ ವರ್ಗದ ಮಕ್ಕಳಿಗೂ ಸಮಾನ ಶಿಕ್ಷಣ ನೀಡಿದರೆ ಸಮಾಜ ಉದ್ದಾರವಾಗಲಿದೆ ಎಂಬುದನ್ನು ಅರಿತು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸಾಧನೆ ಮಾಡಿ ಸಾಕಾರಗೊಳಿಸಿದ್ದಾರೆ ಎಂದರು.
ತಹಸೀಲ್ದಾರ್ ಸೌಮ್ಯ ಮಾತನಾಡಿ, ಶ್ರೀ ಶಿವಕುಮಾರ ಸ್ವಾಮೀಜಿ ಅವರ ಕಾಯಕ ಸೇವೆಗಳನ್ನು ಪರಿಗಣಿಸಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು. ಬಸವ್ಣನವರ ಬಳಿಕ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದು ಶ್ರೀಗಳು ಎಂದು ಶ್ಲಾಘಿಸಿದರು.
ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್, ಮಾಜಿ ಅಧ್ಯಕ್ಷರಾದ ಹೂವಣ್ಣ, ಲೋಕೇಶ್, ಸದಸ್ಯೆ ರಶ್ಮಿ, ವೀರಶೈವ ಸಮಾಜದ ಮುಖಂಡರಾದ ಚಂದು, ಸುರೇಶ್, ವೇದಮೂರ್ತಿ, ಕಮಲಮ್ಮ, ಮಹೇಶ್, ಯೋಗೇಶ್, ಶಿವಣ್ಣ, ಪ್ರಕಾಶ್, ಮಲ್ಲೇಶ್, ಜಗದೀಶ್, ಮಲ್ಲಪ್ಪ
ಇತರರಿದ್ದರು.
ಸಾರ್ವಜನಿಕರಿಗೆ ಅನ್ನ ದಾಸೋಹ ನಡೆಯಿತು.
ಫೋಟೋ-ಕ್ಯಾಪ್ಸನ್ಅರಕಲಗೂಡು ಪಟ್ಟಣದ ಕೊತ್ತಲು ಗಣಪತಿ ದೇವಾಲಯ ಆವರಣದಲ್ಲಿ ವೀರಶೈವ ಸಮಾಜದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಶಾಸಕ ಮಂಜು ಭಾಗವಹಿಸಿ ಪುಷ್ಪಾರ್ಚನೆ ಮಾಡಿದರು.
ಫೋಟೋ-ಕ್ಯಾಪ್ಸನ್-ಅರಕಲಗೂಡು ಪಟ್ಟಣದ ಕೊತ್ತಲು ಗಣಪತಿ ದೇವಾಲಯ ಆವರಣದಲ್ಲಿ ಮಂಗಳವಾರ ಶ್ರೀ ಶಿವಕುಮಾರ ಸ್ವಾಮೀಜಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಅನ್ನದಾಸೋಹಕ್ಕೆ ತಹಸೀಲ್ದಾರ್ ಸೌಮ್ಯ ಅವರು ಬಡಿಸುವ ಮೂಲಕ ಚಾಲನೆ ನೀಡಿದರು.
News5kannada
Ravi Dummi
Tags
ಅರಕಲಗೂಡು