ಅರಕಲಗೂಡು : ತಾಲೂಕಿನ ಮಲ್ಲಿಪಟ್ಟಣ ಹೋಬಳಿ ಮತ್ತರ ಗ್ರಾಮದ ನಿವಾಸಿ ಚನ್ನೇಗೌಡ ಬಿನ್ ದಾಸೇಗೌಡ (70) ಎಂಬ ರೈತ ಸಾಲಬಾಧೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.
ಮಲ್ಲಿಪಟ್ಟಣ ಹೋಬಳಿಯ ಕೆನರಾ ಬ್ಯಾಂಕ್ ನಲ್ಲಿ ಒಂದು ಲಕ್ಷ ಸಾಲ,ಕೈ ಸಾಲವಾಗಿ ಮೂರು ಲಕ್ಷ ಮತ್ತು ಸಂಘ ಸಂಸ್ಥೆಯಿAದ ಒಂದು ಲಕ್ಷ ಸಾಲ ಮಾಡಿದ್ದು,ಸಾಲ ತೀರಿಸಲು ಸಾಧ್ಯವಾಗದೇ ಮನೆ ಬಳಿ ವಿಷ ಸೇವನೆ ಮಾಡಿ ಶನಿವಾರ ಮುಂಜಾನೆ ಮೃತಪಟ್ಟಿದ್ದಾನೆ.
ಮೃತ ರೈತನಿಗೆ ಒಂದು ಎಕರೆ ಮೂವತ್ತೇಳು ಗುಂಟೆ ಹಿಡುವಳಿ ಜಮೀನಿದ್ದು,ಶುಂಠಿ,ಜೋಳ ಸೇರಿದಂತೆ ಇತರೆ ಬೆಳೆ ಕೈಗೊಂಡು ನಷ್ಟ ಅನುಭವಿಸಿದ್ದ ಎನ್ನಲಾಗಿದೆ. ಇಬ್ಬರು ಗಂಡು ಮಕ್ಕಳು ಹಾಗೂ ಪತ್ನಿ ಇರುತ್ತಾರೆ.
ಸ್ಥಳಕ್ಕೆ ತಹಸೀಲ್ದಾರ್ ಸೌಮ್ಯ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ನೀಡಿದರು.ಮೃತ ರೈತ ಮಾಡಿರುವ ಸಾಲ ಕುರಿತು ಪರಿಶೀಲನೆ ಬಳಿಕ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಅತೀ ತುರ್ತಾಗಿ ಪರಿಹಾರ ತಲುಪಿಸಲು ಕ್ರಮ ವಹಿಸಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಸಹಾಯಕ ನಿರ್ದೇಶಕರಾದ ಕವಿತಾ, ಉಪ ತಹಸೀಲ್ದಾರ್ ಹರೀಶ್, ರಾಜಶ್ವನಿರೀಕ್ಷಕ ವಸಂತ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
News5Kannada
Ravi Dummi
Tags
ಮಲ್ಲಿಪಟ್ಟಣ