ಅರಕಲಗೂಡು : ತಾಲೂಕಿನ ರಾಮನಾಥಪುರ ಗ್ರಾಮದ ಮುಸ್ಲಿಂ ಸಮುದಾಯಕ್ಕೆ ಮಂಜೂರಾಗಿದ್ದ ಸ್ಮಶಾನ ಜಾಗಕ್ಕೆ ತೆರಳಲು ರಸ್ತೆಯನ್ನು ಗುರುತು ಮಾಡಿಕೊಡಲಾಯಿತು ಎಂದು ಗ್ರೇಡ್-2 ತಹಸೀಲ್ದಾರ್ ಸಿ.ಆರ್.ಸ್ವಾಮಿ ತಿಳಿಸಿದರು.
ಬಿಳಗುಲಿ ಗ್ರಾಮದ ಸ. ನಂ. 17 ರಲ್ಲಿ ಮುಸ್ಲಿಂ ಸಮ್ಮುದಾಯಕ್ಕೆ ಶವಸಂಸ್ಕಾರ ಮಾಡಲು 1-00 ಎಕರೆ ಜಾಗವನ್ನು 2016-2017 ನೇ ಸಾಲಿನಲ್ಲಿ ಮಂಜೂರಾಗಿದ್ದು, ಈ ಪ್ರದೇಶಕ್ಕೆ ತೆರಳಲು ಸೂಕ್ತ ದಾರಿ ಇರಲಿಲ್ಲ. ರಸ್ತೆಗೆ ಜಾಗ ಕೋರಿ ಮುಸ್ಲಿಂ ಸಮುದಾಯದವರು ತಹಸೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು.ಈ ಮೇರೆ ತಹಸೀಲ್ದಾರ್ ಕೆ. ಸಿ. ಸೌಮ್ಯ ರವರ ಸೂಚನೆಯಂತೆ ಸ್ಥಳಕ್ಕೆ ಸ್ಥಳಕ್ಕೆ ತಾಲೂಕು ಮೋಜಿಣಿಧಾರಾರಿಂದ ಅಳತೆ ಕಾರ್ಯ ನಡೆಸಿ ಸದರಿ ಪ್ರದೇಶದಲ್ಲಿ ಅಕ್ರಮ ಸಕ್ರಮ ದಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿ ಮಾಡುತಿದ್ದ ಬಿಳಗುಲಿ ಗ್ರಾಮದ ರೈತರ ಮನವೊಲಿಸಿ ಜೆ. ಸಿ. ಬಿ. ಯಂತ್ರದಿAದ ರಸ್ತೆ ಕೆಲಸ ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಜಶ್ವನಿರೀಕ್ಷಕರಾದ ಬಾಸ್ಕರ್ ತಾಲ್ಲೂಕು ಮೋಜಿಣಿದಾರ ಅನಂತ್, ಗ್ರಾಮ ಆಡಳಿತ ಅಧಿಕಾರಿ ಕೆ. ಜೆ. ಧರ್ಮೇಶ್ ಹಾಗೂ ರಾಮನಾಥಾಪುರ ಗ್ರಾಮದ ಮುಸ್ಲಿಂ ಮುಖಂಡರು ಹಾಗೂ ಬಿಳಗುಲಿ ಗ್ರಾಮದ ಗ್ರಾಮಸ್ಥರು ಹಾಜರಿದ್ದರು.
ಫೋಟೋ-ಕ್ಯಾಪ್ಸನ್-ಅರಕಲಗೂಡು ತಾಲೂಕು ರಾಮನಾಥಪುರ ಗ್ರಾಮದ ಮುಸ್ಲಿಂ ಸಮುದಾಯದವರ ಸ್ಮಶಾನ ಜಾಗಕ್ಕೆ ತೆರಳಲು ಜೆಸಿಬಿ ಮೂಲಕ ರಸ್ತೆ ನಿರ್ಮಿಸಿಕೊಡಲಾಯಿತು.
News5kannada
Ravi Dummi
Tags
ರಾಮನಾಥಪುರ