S.S.L.C ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಶುಭಹಾರೈಸಿದ ಶಾಸಕ ಎ.ಮಂಜು

ಅರಕಲಗೂಡು : ತಾಲ್ಲೂಕಿನ ರಾಮನಾಥಪುರ ಪಟ್ಟಾಭೀರಾಮ ಪ್ರೌಢಶಾಲಾ ಪರೀಕ್ಷಾ ಕೇಂದ್ರಕ್ಕೆ ಇಂದು ಶಾಸಕ ಎ.ಮಂಜು ಭೇಟಿ ನೀಡಿ ಪರೀಕ್ಷಾರ್ಥಿಗಳಿಗೆ ಗುಲಾಬಿ ಹೂ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತಾನಾಡಿದ ಶಾಸಕರು, ಎಸ್.ಎಸ್.ಎಲ್‌.ಸಿ ಪರೀಕ್ಷೆ ಫಲಿತಾಂಶ ಜಿಲ್ಲೆ ಹಾಗೂ ರಾಜ್ಯದಲ್ಲಿಯೆ ಗಮನ ಸೆಳೆಯುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಲವು ಶೈಕ್ಷಣಿಕ ಆಯಾಮಗಳ ಮೂಲಕ ಸಜ್ಜುಗೊಳಿಸಿದ್ದು, ಈ ಹಿನ್ನಲೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಇಒ ನಾರಾಯಣ , ಟಿಪಿಒ ನಿಂಗಯ್ಯ  ಹಾಗೂ ಶಿಕ್ಷಕರು ಹಾಜರಿದ್ದರು.

                     News5kannada_Digital
                         Ravi Dummi

Post a Comment

Previous Post Next Post