ಅರಕಲಗೂಡು : ತಾಲೂಕಿನ ಪಡಿತರದಾರರಿಗೆ ಮಾರ್ಚ್ ಮಾಹೆಯಲ್ಲಿ ಪ್ರತಿಯೊಬ್ಬ ಸದಸ್ಯರಿಗೆ 15ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುತಿದ್ದು,ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಕೇಳಿ ಪಡೆದುಕೊಳ್ಳಬೇಕೆಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಪಿ.ಶ್ರೀಧರ್‌ಗೌಡ ಮನವಿ ಮಾಡಿದರು.
ತಾಲೂಕಿನ ಕೊಣನೂರು ಹೋಬಳಿ ಬನ್ನೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯ ಬೆಲೆ ಅಂಗಡಿಯಲ್ಲಿ ಸೋಮವಾರ ಬಿಪಿಎಲ್ ಕಾರ್ಡ್ದಾರರಿಗೆ ಅಕ್ಕಿ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ನಮ್ಮ ಸರಕಾರ ನುಡಿದಂತೆ ಪಂಚ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದೆ.ಪಡಿತರ ವಿತರಣೆಗೆ ನೀಡಿದ 10ಕೆಜಿ ಅಕ್ಕಿ ವಿತರಣೆಗೆ ಕೇಂದ್ರ ಸರಕಾರದಿಂದ ಸಹಕಾರ ಸಿಕ್ಕಿರಲಿಲ್ಲ.ಈ ಸಲುವಾಗಿ ಪ್ರತಿ ಪಡಿತರರಿಗೆ 5ಕೆಜಿ ಅಕ್ಕಿ ಮತ್ತು 170ರೂ ಹಣ ನೇರವಾಗಿ ಪಡಿತರರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿತ್ತು.ಪ್ರಸ್ತುತ ಕೇಂದ್ರದಿAದ ಅಕ್ಕಿ ಖರೀದಿ ಮಾಡಿ ನೀಡಿದ ಮಾತಿನಂತೆ 10ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ.ಅಲ್ಲದೆ ಕಳೆದ ತಿಂಗಳ ಬಾಕಿ ಅಕ್ಕಿ ಸೇರಿ ಪ್ರಸ್ತುತ ಮಾಹೆ ಪ್ರತಿ ಪಡಿತರರಿಗೆ 15ಕೆಜಿ ಅಕ್ಕಿ ದೊರೆಯುತ್ತಿದೆ.ಮುಂದಿನ ತಿಂಗಳಿAದ 10ಕೆಜಿ ಅಕ್ಕಿ ದೊರೆಯುವುದರಿಂದ ಹಣ ಸ್ಥಗಿತಗೊಳ್ಳಲಿದೆ ಎಂದು ಹೇಳಿದರು.
ಪ್ರಮುಖವಾಗಿ ಅಂತ್ಯೋದಯ ಪಡಿತರ ಚೀಟಿಗೆ ಒಂದರಿAದ3ಮAದಿಗೆ 35ಕೆಜಿ ಅಕ್ಕಿ,4ಸದಸ್ಯರಿರುವ ಕಾರ್ಡ್ಗೆ45ಕೆಜಿ,5ಸದಸ್ಯರಿರುವ ಕಾರ್ಡ್ಗೆ65ಕೆಜಿ,6ಸದಸ್ಯರಿರುವ ಕಾರ್ಡ್ಗೆ 85ಕೆಜಿ,7ಸದಸ್ಯರಿ 105ಕೆಜಿ,8ಮಂದಿಗೆ 125ಕೆಜಿ,9ಮಂದಿಗೆ145ಕೆಜಿ,10ಮAದಿಗೆ 165ಕೆಜಿ,11ಕ್ಕೆ 185ಕೆಜಿ ಮತ್ತು 12ಮಂದಿ ಇರುವ ಕಾರ್ಡ್ಗೆ 205ಕೆಜಿ ಅಕ್ಕಿ ದೊರೆಯಲಿದೆ.ಅದೇ ರೀತಿ ಬಿಪಿಎಲ್ ಕಾರ್ಡ್ನ ಪ್ರತಿಯೊಬ್ಬರಿಗೂ ತಲಾ 15ಕೆಜಿ ಅಕ್ಕಿ ಸಿಗಲಿದೆ.ಕಡ್ಡಾಯವಾಗಿ ಸರಕಾರ ನಿಗದಿಮಾಡಿರುವ ಪಡಿತರವನ್ನು ಕೇಳಿ ಪಡೆದುಕೊಳ್ಳಬೇಕು.ನ್ಯಾಯಬೆಲೆ ಅಂಗಡಿ ಮಾಲೀಕರು ಕೂಡ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು.ಯಾವುದೇ ರೀತಿಯ ಹಣವನ್ನು ಕೊಡುವಂತ್ತಿಲ್ಲ.ಮತ್ತೆ ಅಕ್ಕಿಯನ್ನು ಸಹ ಹಿಡಿಯುವಂತ್ತಿಲ್ಲ.ಈ ಯಾವುದೇ ಲೋಪಕಂಡುಬAದರೇ ನೇರವಾಗಿ ಗ್ರಾಹಕರು ದೂರು ನೀಡಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅರಕಲಗೂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸೋಮಶೇಖರ್, ಆಹಾರ ಇಲಾಖೆ ನಿರೀಕ್ಷಕಿ ರೂಪ,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಚಂದ್ರಕಲಾ, ಗ್ಯಾರಂಟಿ ಸಮಿತಿಯ ಸದಸ್ಯರುಗಳು ಇದ್ದರು.
News5kannada
Ravi Dummi
Tags
ಕೊಣನೂರು