ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳನ್ನು ಗುಲಾಬಿ ಹೂ ನೀಡಿ ಸ್ವಾಗತಿಸಿದ ತಾಲೂಕು ಆಡಳಿತ

ಅರಕಲಗೂಡು : ತಾಲೂಕಿನ 9 ಪರೀಕ್ಷಾ ಕೇಂದ್ರಗಳಲ್ಲಿ ಆರಂಭಗೊAಡ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ್ಷ ಪರೀಕ್ಷೆಯನ್ನು ವಿದ್ಯಾರ್ಥಿಗಳು ಮನೆಯ ಹಬ್ಬದಂತೆ ಸಂಭ್ರಮಿಸಿ ಯಶಸ್ವಿಯಾಗಿ ಮೊದಲ ದಿನದ ಮಾತೃ ಭಾಷೆ ಕನ್ನಡ ವಿಷಯದ ಪತ್ರಿಕೆಯನ್ನು ಬರೆದರು.

ಪಟ್ಟಣದ ಸರಕಾರಿ ಬಾಲಕಿಯರ ಮತ್ತು ಬಾಲಕರ ಪದವಿ ಪೂರ್ವ ಕಾಲೇಜುಗಳ ಪರೀಕ್ಷಾ ಕೇಂದ್ರಗಳು ಸೇರಿದಂತೆ ತಾಲೂಕಿನಾದ್ಯಂತ ಒಟ್ಟು 9 ಪರೀಕ್ಷಾ ಕೇಂದ್ರಗಳ ಮುಖ್ಯಧ್ವಾರದಲ್ಲಿ ಹಸಿರು ತೋರಣ,ರಂಗೋಲಿಯನ್ನು ಇಟ್ಟು ಆತ್ಮೀಯ ಸ್ವಾಗತಕೋರುವ ಬ್ಯಾನರ್ ಅಳವಡಿಕೆಯನ್ನು ವಿನೂತನ ರೀತಿಯಲ್ಲಿ ಹಾಕಲಾಗಿತ್ತು.
ಪಟ್ಟಣದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದ ಮುಖ್ಯಧ್ವಾರದಲ್ಲಿ ತಹಸೀಲ್ದಾರ್ ಸೌಮ್ಯ,ಬಿಇಒ ನಾರಾಯಣ,ಬಿಆರ್‌ಸಿ ಬಾಲರಾಜ್ ಸೇರಿದಂತೆ ಶಿಕ್ಷಕರು ಕೈಯಲ್ಲಿ ಗುಲಾಬಿಯನ್ನು ಹಿಡಿದು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಶುಭಾಶಯ ಕೋರಿದರು.ಇದು ಮನೆಯಿಂದ ಪರೀಕ್ಷೆ ಭಯದಲ್ಲಿ ಬಂದಿದ್ದ ಮಕ್ಕಳಿಗೆ ಆತ್ಮಸ್ಥೆöÊರ್ಯ ತುಂಬುವ ನಿಟ್ಟಿನಲ್ಲಿ ಹೆಚ್ಚು ಉತ್ತೇಜಿತವಾಗಿ ಕಂಡುಬAದಿತು.
ವಿದ್ಯಾರ್ಥಿಗಳು ಅರ್ಧಗಂಟೆ ಮುಂಚಿತವಾಗಿ ಕೇಂದ್ರಗಳ ಬಳಿ ಆಗಮಿಸಿ ಸರದಿ ಸಾಲಿನಲ್ಲಿ ಆಗಮಿಸಿ ಗುಲಾಬಿ ಹೂ ಪಡೆದು ಆತ್ಮಸಂತೋಷದಿAದ ಪರೀಕ್ಷಾ ಕೇಂದ್ರಗಳಿಗೆ ತೆರಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಸೌಮ್ಯ ಅವರು ಮಾತನಾಡಿ,ಶಿಕ್ಷಣ ಇಲಾಖೆ ಈ ಬಾರಿ ಅತ್ಯಂತ ಕ್ರೀಯಾಶೀಲವಾಗಿ ಪರೀಕ್ಷೆ ಬರೆಯುವ ಎಲ್ಲಾ ಮಕ್ಕಳನ್ನು ಹಂತ ಹಂತವಾಗಿ ಸಜ್ಜುಗೊಳಿಸಿದೆ.ಪರೀಕ್ಷೆಗೆ ಬರುವಾಗಲೂ ಕೂಡ ಮಕ್ಕಳಲ್ಲಿ ಯಾವುದೇ ಭಯ,ಆತಂಕ ಎದುರಾಗಂತೆ ಮೊದಲ ದಿನದ ಮಾತೃಭಾಷೆ ವಿಷಯವಾಗಿ ಪರೀಕ್ಷೆ ಬರೆಯುವ ಮಕ್ಕಳಿಗೆ ಗುಲಾಬಿ ನೀಡುವ ಮೂಲಕ ಮತ್ತೊಮ್ಮೆ ಆತ್ಮವಿಶ್ವಾಸವನ್ನು ಮೂಡಿಸುವ ನಿಟ್ಟಿನಲ್ಲಿ ಈ ರೀತಿಯ ವಿನೂತ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಅಲ್ಲದೆ ಎಲ್ಲಾ ಮಕ್ಕಳು ತುಂಬಾ ಚೆನ್ನಾಗಿ ಪರೀಕ್ಷೆ ಬರೆಯಿರಿ ಎಂದು ಗುಲಾಬಿ ಹೂ ನೀಡಿ ಶುಭಾಶಯ ಕೋರಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣ ಮಾತನಾಡಿ,ಪಟ್ಟಣ ಸೇರಿದಂತೆ ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಹೂ ತೋರಣಗಳಿಂದ ಶೃಂಗರಿಸಲಾಗಿದೆ.ಪರೀಕ್ಷೆ ಭಯವಿಲ್ಲದೆ ಹಬ್ಬದಂತೆ ವಿದ್ಯಾರ್ಥಿಗಳು ಸಂಭ್ರಮಿಸಿ ಬರೆಯಬೇಕೆಂಬ ಅಭಿಲಾಶೆಯಿಂದ ಹೀಗೆ ಮಾಡಲಾಗಿದೆ.ಯಾವುದೇ ಭಯವಿಲ್ಲದೆ ನಮ್ಮ ಮಕ್ಕಳು ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ಬರೆಯುತ್ತಾರೆ ಎಂಬ ಅಚಲ ನಂಬಿಕೆ ನನ್ನದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು,ಶಿಕ್ಷಕರು ಹಾಜರಿದ್ದರು.

                             News5kannada
                                  Ravi Dummi

Post a Comment

Previous Post Next Post