ಅರಕಲಗೂಡು : ತಾಲೂಕು ಹೀರೆಹಳ್ಳಿ ಮತ್ತು ರಾಮನಾಥಪುರ ರಸ್ತೆ ಮಾರ್ಗದಲ್ಲಿ ಆಕ್ರಮವಾಗಿ ಸಾಗಿಸಲಾಗುತ್ತಿದ್ದ 1.5 ಲಕ್ಷ ರೂ ಬೆಲೆಯ ಬೀಟೆ ಮರದ ತುಂಡುಗಳ ಸಮೇತ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದ್ದಿದ್ದಾರೆ .
ಬುಧವಾರ ರಾತ್ರಿ ಮಿನಿ ಅಶೋಕ ಲೇಲ್ಯಾಂಡ್ ಮಿನಿ ವಾಹನದಲ್ಲಿ 9 ಬೀಟೆ ತುಂಡುಗಳನ್ನು ಸಾಗಿಸುತ್ತಿರುವ ಮಾಹಿತಿ ಮೇರೆಗೆ ವಲಯ ಅರಣ್ಯ ಅಧಿಕಾರಿ ಯಶ್ಮಾಮಾಚಮ್ಮ ಅವರ ನಿರ್ದೇಶನದಂತೆ ವಾಹನವನ್ನು ಅಡ್ಡಗಟ್ಟಿ ತಪಾಸಣೆ ಮಾಡಿದ್ದಾಗ ಆಕ್ರಮ ಬೀಟೆ ಮರ ಸಾಗಿಸುತ್ತಿರುವುದು ಕಂಡು ಬಂದಿದೆ .
ವಾಹನ ಸಮೇತ 9 ಬೀಟೆ ತುಂಡು ಹಾಗೂ ಮೂವರನ್ನು ವಶಕ್ಕೆ ಪಡೆದ್ದಿದ್ದಾರೆ .
ಅರಕಲಗೂಡು ತಾಲ್ಲೂಕಿನ ಹೀರೆಹಳ್ಳಿ ಗ್ರಾಮದ ಚಂದ್ರಶೇಖರ್, ಹಲಗನಹಳ್ಳಿ ಮಂಜುನಾಥ್, ಸಾತೇಗಾಳ ಗ್ರಾಮದ ಚಂದ್ರು ಬಂಧಿತರು.
ಕಾರ್ಯಚರಣೆಯಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಗುರುಸ್ವಾಮಿ , ಗಸ್ತು ಅರಣ್ಯ ಪಾಲಕ ದೇವೇಂದ್ರ , ಮಂಜುನಾಥ , ಜಗದೀಶ್ ,ಪ್ರಭಾಕರ್ , ಚಾಲಕ ಪ್ರಕಾಶ್ ಪಾಲ್ಗೊಂಡಿದ್ದರು.
News5kannada
Ravi Dummi
Tags
ಅರಕಲಗೂಡು