ಅರಕಲಗೂಡು : 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಮಾರ್ಚ್-21ರಿಂದ ಏಪ್ರಿಲ್4ರತನಕ ತಾಲೂಕಿನ 9ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು,ಮಕ್ಕಳು ಯಾವುದೇ ರೀತಿಯ ಆತಂಕ,ಭಯವನ್ನು ಇಟ್ಟುಕೊಳ್ಳದೇ ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ ಬರೆಯಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ ಅವರು ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಸರ್ಕಾರಿ 34, ಅನುದಾನಿತ 13, ಅನುದಾನರಹಿತ 11 ಹೀಗೆ ಒಟ್ಟು 58 ಪ್ರೌಢ ಶಾಲೆಗಳಿದ್ದು 2024-25 ನೇ ಸಾಲಿನಲ್ಲಿ ಒಟ್ಟು 2429 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ಇದರಲ್ಲಿ ಗಂಡು ಮಕ್ಕಳು 1257 ಮತ್ತು ಹೆಣ್ಣುಮಕ್ಕಳು 1172 ಇದ್ದಾರೆ. ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 9 ಪರೀಕ್ಷಾ ಕೇಂದ್ರಗಳನ್ನ ರಚಿಸಲಾಗಿರುತ್ತದೆ.
ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಅರಕಲಗೂಡು.
ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ಅರಕಲಗೂಡು.
ಸರ್ಕಾರಿ ಪ್ರೌಢಶಾಲೆ ಮಲ್ಲಿಪಟ್ಟಣ. ಸರ್ಕಾರಿ ಪ್ರೌಢಶಾಲೆ ದೊಡ್ಡಮಗ್ಗೆ. ಗ್ರಾಮಾಂತರ ಪ್ರೌಢಶಾಲೆ ಬೈಚನಹಳ್ಳಿ. ಪಟ್ಟಾಬಿರಾಮ ಪ್ರೌಢಶಾಲೆ ರಾಮನಾಥಪುರ. ಬಿಎಸ್‌ಎಸ್ ಪ್ರೌಢಶಾಲೆ ಕೊಣನೂರು.
ಎಂಕೆಎಸ್ ಲಯನ್ಸ್ ಪ್ರೌಢಶಾಲೆ ಕೊಣನೂರು.
ಹಾಗೂ ಸರ್ಕಾರಿ ಪ್ರೌಢಶಾಲೆ ಕಾಳೇನಹಳ್ಳಿ. ಪರೀಕ್ಷಾ ಕೇಂದ್ರಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಈಗಾಗಲೆ ತಾಲ್ಲೂಕು ಹಂತದಲ್ಲಿ ಮಾನ್ಯ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಪೂರ್ವತಯಾರಿ ಸಭೆ ನಡೆಸಿ ಕೆಎಸ್‌ಆರ್‌ಟಿಸಿ,ಕೆಇಬಿ,ಆರಕ್ಷಕ ಇಲಾಖೆ, ಮತ್ತು ಆರೋಗ್ಯ ಇಲಾಖೆಯ ಸಹಕಾರವನ್ನ ಕೋರಲಾಗಿದೆ.
ಮೂರು ರೂಟ್ ಗಳನ್ನ ರಚಿಸಿದ್ದು ಮಾರ್ಗಾಧಿಕಾರಿಗಳ ನೇಮಕಾತಿ ಸಹ ಮಾಡಲಾಗಿರುತ್ತದೆ.
ಪರೀಕ್ಷೆಗೆ ಮುಖ್ಯ ಅಧೀಕ್ಷಕರು,ಪ್ರಶ್ನೆಪತ್ರಿಕೆ ಪಾಲಕರು,ಸ್ಥಾನಿಕ ಜಾಗೃತದಳ, ಮೊಬೈಲ್ ಸ್ವಾಧೀನಾಧಿಕಾರಿ, ಮತ್ತು ಕೊಠಡಿಮೇಲ್ವಿಚಾರಕರ ನೇಮಕಾತಿ ಆಗಿರುತ್ತದೆ ಎಂದಿದ್ದಾರೆ.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿಯೂ ಮೂಲಭೂತ ಸೌಕರ್ಯ ಕಲ್ಫಿಸಲಾಗಿದ್ದು ಯಾವುದೇ ಮಗು ನೆಲದಲ್ಲಿ ಕುಳಿತು ಪರೀಕ್ಷೆ ಬರೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಪರೀಕ್ಷೆ ಬರೆಯುವ ಎಲ್ಲ ಕೇಂದ್ರಗಳಲ್ಲಿಯೂ ಸಿಸಿಟಿವಿ ಮತ್ತು ವೆಬ್‌ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷಾ ಕೇಂದ್ರದ ಸುತ್ತಮುತ್ತ 200ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಮಾನ್ಯ ಜಿಲ್ಲಾಧಿಕಾರಿಯವರಿಂದ ಜಾರಿಮಾಡಲಾಗಿರುತ್ತದೆ ಹಾಗೂ ಪರೀಕ್ಷಾ ಕೇಂದ್ರದ ಸುತ್ತಮುತ್ತ ಇರುವ ಜೆರಾಕ್ಸ್ ಅಂಗಡಿಗಳನ್ನ ಮುಚ್ಚುವಂತೆಯೂ ಆದೇಶಿಸಲಾಗಿದೆ.
ಯಾವುದೇ ಕಾರಣಕ್ಕೂ ಪರೀಕ್ಷಾ ಕೇಂದ್ರದ ಒಳಗೆ ಬಾಹ್ಯ ವ್ಯಕ್ತಿಗಳ ಪ್ರವೇಶವನ್ನ ನಿಷೇಧಿಸಲಾಗಿರುತ್ತದೆ. ಮತ್ತು ಮೊಬೈಲ್ ಗಳನ್ನ ಪರೀಕ್ಷಾ ಕೇಂದ್ರದ ಒಳಗೆ ನಿರ್ಭಂದಿಸಲಾಗಿರುತ್ತದೆ ಎಂದು ಹೇಳಿದ್ದಾರೆ.
ಒಟ್ಟಾರೆ ಎಲ್ಲ ರೀತಿಯಲ್ಲೂ ಸಕಲ ಸಿದ್ದತೆಯನ್ನ ಮಾಡಿಕೊಂಡಿದ್ದು ಮಕ್ಕಳು ಭಯಮುಕ್ತರಾಗಿ ಪ್ರೀತಿಯಿಂದ ಪರೀಕ್ಷೆ ಬರೆಯಬೇಕು.ಅಲ್ಲದೆ ಮಾನ್ಯ ಜಿಲ್ಲಾಧಿಕಾರಿಯವರ ಮನವಿಯಂತೆ ಸಂಬ್ರಮದಿAದ ಪರೀಕ್ಷೆ ಬರೆಯಿರಿ. ಆದರೆ ಪರೀಕ್ಷೆಯೆ ಬದುಕಲ್ಲ ಎಂಬುದನ್ನ ಮರೆಯದಿರಿ ಎಂಬ ಕಿವಿಮಾತನ್ನೂ ಸಹ ಮಕ್ಕಳಿಗೆ ತಿಳಿಸಿದ್ದಾರೆ.
News5kannada
Ravi Dummi
Tags
ಅರಕಲಗೂಡು