ಅರಕಲಗೂಡು : ತಾಲೂಕಿನ ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯ ರಾಮನಾಥಪುರ ಐ ಬಿ ಸರ್ಕಲ್ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತಿದ್ದ ಇಬ್ಬರನ್ನು ಮಾಲು ಸಮೇತ ವಶಕ್ಕೆ ಪಡೆಯಲಾಗಿದೆ.
ಒಡಿಶಾ ಮೂಲದ ಸಮೀರ್ ಪ್ರದಾನ್ ಮತ್ತು ಗೀತಾ ಪ್ರದಾನ್ ಬಂಧಿತರು.
ಜಾಹಿರಾತು
ಇಂದು ಬೆಳಿಗ್ಗೆ 10ರ ಸಮಯದಲ್ಲಿ ರಾಮನಾಥಪುರ ಪ್ರವಾಸಿ ಮಂದಿರ ವೃತ್ತದಲ್ಲಿ ಬಂಧಿತ ಇಬ್ಬರು ಗಾಂಜಾ ಮಾರುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬರುತ್ತೆ, ಕೂಡಲೇ ಕಾರ್ಯ ಪ್ರೌವೃತರಾದ ಪೊಲೀಸರು ಇಬ್ಬರನ್ನು ಮಾಲು ಸಮೇತ ಬಂಧಿಸಿದ್ದಾರೆ.
ಹತ್ತು ಕೆಜಿ ಆರೂನೂರು ಗ್ರಾಮ್ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.
News5kannada
Ravi Dummi
Tags
ಕೊಣನೂರು