Arkalgud | ಟ್ರ್ಯಾಕ್ಟರ್ - ಆಟೋ ನಡುವೆ ಅಪಘಾತ : ಓರ್ವ ವ್ಯಕ್ತಿ ಸಾವು

ಅರಕಲಗೂಡು  : ತಾಲೂಕಿನ ಕೇರಳಪುರದಲ್ಲಿ ಟ್ರ್ಯಾಕ್ಟರ್ ಮತ್ತು ಗೂಡ್ಸ್ ಆಟೋ ನಡುವೆ ಅಪಘಾತ ಸಂಭವಿಸಿ ಓರ್ವ ಮೃತ ಪಟ್ಟಿರುವ ಘಟನೆ ನೆಡೆದಿದೆ.

                 ಜಾಹೀರಾತು / Advertisement


ರಾಮನಥಪುರದಿಂದ ಕೇರಳಪುರದ ಕಡೆಗೆ ಟ್ರ್ಯಾಕ್ಟರ್ ನಲ್ಲಿ ಮರದ ತುಂಡುಗಳನ್ನು ತುಂಬಿಕೊಂಡು ಹೋಗುವ ಸಂದರ್ಭದಲ್ಲಿ ಟ್ರ್ಯಾಕ್ಟರ್  ಪಂಚರ್ ಆದ ಕಾರಣ ಚಾಲಕ ತಕ್ಷಣ ಟ್ರ್ಯಾಕ್ಟರ್ ನಿಲ್ಲಿಸಿದ್ದಾನೆ  ನಂತರ ಅದೇ ರಸ್ತೆಯಲ್ಲಿ ಹಿಂಬದಿಯಿಂದ ಬರುತ್ತಿದ್ದ ಆಟೋ ಟ್ರ್ಯಾಕ್ಟರ್ಗೆ  ಡಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ ಸ್ವಾಮಿ ಎಂಬಾತಾ ಸ್ಥಳದಲ್ಲೇ ಮೃತಪಟ್ಟಿದ್ದು ಮೃತ ವ್ಯಕ್ತಿ ಕಾಳಮ್ಮನ ಕೊಪ್ಪಲು ಗ್ರಾಮದವನು ಎಂದು ತಿಳಿದು ಬಂದಿದ್ದು ಆಟೋದಲ್ಲಿ ಇದ್ದ ಇನ್ನಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

                             News5Kannada 
                                   Ravi Dummi

Post a Comment

Previous Post Next Post