1 ಕೋಟಿ ವೆಚ್ಚದ ಹೆಚ್ಚುವರಿ ಹಾಸ್ಟೆಲ್ ಕಟ್ಟಡ ಕಾಮಗಾರಿಗೆ ಶಾಸಕ ಎ.ಮಂಜು ಭೂಮಿ ಪೂಜೆ

ಅರಕಲಗೂಡು : ಪಟ್ಟಣದ ಸರ್ಕಾರಿ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ಹೆಚ್ಚುವರಿ ಕೊಠಡಿ ಕಾಮಗಾರಿಗೆ ಶಾಸಕ ಎ.ಮಂಜು ಭೂಮಿ ಪೂಜೆ ನೆರವೇರಿಸಿದರು.

ವಿದ್ಯಾರ್ಥಿ ನಿಲಯವು ಕೊಠಡಿ ಸಮಸ್ಯೆಯನ್ನು ಎದುರಿಸುತ್ತಿತ್ತು ಸಮಸ್ಯೆ ನಿವಾರಣೆ ಒಂದು ಕೋಟಿ ವೆಚ್ಚದಲ್ಲಿ ನೂತನ ಹೆಚ್ಚುವರಿ ಕೊಠಡಿ ಕಾಮಗಾರಿ ನಡೆಯಲಿದೆ.ನಿಗದಿತ ಅವಧಿ ಒಳಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಮಕ್ಕಳ ಶೈಕ್ಷಣಿ ಅಭಿವೃದ್ಧಿಗೆ ಮುಂದಾಗಬೇಕೆಂದು ಗುತ್ತಿಗೆದಾರರಿಗೆ ಶಾಸಕರು ಸೂಚನೆ ನೀಡಿದರು.
                            ಜಾಹೀರಾತು
 ಪಟ್ಟಣದ ಹಳೆಯ ವಿದ್ಯಾರ್ಥಿ ನಿಲಯವಾದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದು, ಕೊಠಡಿ ಸಮಸ್ಯೆ ಇತ್ತು. ಸರಕಾರಿ ಮಟ್ಟದಲ್ಲಿ ಒಂದು ಕೋಟಿ ಅನುದಾನ ತಂದು ಕೊಠಡಿ ಸಮಸ್ಯೆ ನಿವಾರಣೆ ಮಾಡಲಾಗುತ್ತಿದೆ ಎಂದರು.
ಈ ನೂತನ ಹೆಚ್ಚುವರಿ ಕೊಠಡಿ ಕಾಮಗಾರಿ ಪೂರ್ಣಗೊಂಡರೆ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರವಾಗಲಿದೆ ಎಂದು ಶಾಸಕ ಮಂಜು ತಿಳಿಸಿದರು.

                              ಜಾಹೀರಾತು
ಕಾಮಗಾರಿಯನ್ನು ಅತ್ಯಂತ ಗುಣಮಟ್ಟದಿಂದ ನಿರ್ವಹಿಸಬೇಕಿದ್ದು ಯಾವುದೇ ಲೋಪ ಆಗದಂತೆ ಎಚ್ಚರಿಸಬೇಕೆಂದು ಗುತ್ತಿಗೆದಾರರಿಗೆ ಅವರು ಸೂಚನೆ ನೀಡಿದರು.
ಕಾಮಗಾರಿಯನ್ನು ಆರು ತಿಂಗಳ ಒಳಗೆ ಪೂರ್ಣಗೊಳಿಸಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗುವುದಾಗಿ ಗುತ್ತಿಗೆದಾರ ಶಾಸಕರು ಸಮ್ಮುಖದಲ್ಲಿ ಭರವಸೆ ನೀಡಿದರು.
 ಈ ಸಂದರ್ಭದಲ್ಲಿ ನಿಲಯದ ಅಧಿಕಾರಿಯಾದ ಕಾವೇರಿ ಮುಖಂಡ ಜಬಿವುಲ್ಲಾ ಹಾಗೂ ವಿಜಯ್ ಕುಮಾರ್ ಇದ್ದರು.

                       News5kannada 
                         Ravi Dummi

Post a Comment

Previous Post Next Post