ಪ್ರಿಯಕರನ ಜೊತೆ ಪತ್ನಿ ಪರಾರಿ – ನದಿಗೆ ಹಾರಿ ಪತಿ ಆತ್ಮಹತ್ಯೆ


ಅರಕಲಗೂಡು : ಪ್ರಿಯಕರನ ಜೊತೆ ಪತ್ನಿ ಓಡಿ ಹೋಗಿದ್ದರಿಂದ ಜಿಗುಪ್ಪೆಗೊಂಡಿದ್ದ ಪತಿ ಶುಕ್ರವಾರ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಾಲೂಕಿನ ಹೊನ್ನವಳ್ಳಿ ಗ್ರಾಮದ ರವಿ (38) ಆತ್ಮಹತ್ಯೆಗೆ ಶರಣಾದ ಪತಿ. ರವಿಯ ಪತ್ನಿ ಕೆಲ ದಿನಗಳ ಹಿಂದೆ ಗಂಡನನ್ನು ಬಿಟ್ಟು ಮಗುವಿನೊಂದಿಗೆ ಹೊನ್ನವಳ್ಳಿ ಗ್ರಾಮದ ಪ್ರದೀಪ್ ಜೊತೆ ಪರಾರಿಯಾಗಿದ್ದಳು. ಇದರಿಂದ ಮನನೊಂದ ರವಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಸರಿಯಾಗಿ ಸ್ಪಂದಿಸದ ಕಾರಣ ಎಸ್ಪಿಗೂ ದೂರು ನೀಡಿದ್ದರು. 
ಹೊಳೆನರಸೀಪುರ ತಾಲ್ಲೂಕಿನ ಮಾಕವಳ್ಳಿ ಬಳಿ ಹೇಮಾವತಿ ನದಿಗೆ ರವಿ ಹಾರಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News5kannada - Ravi Dummi

Post a Comment

Previous Post Next Post