ಮೈಕ್ರೊ ಫೈನಾನ್ಸ್ ಕಿರಕುಳ : ರೈತ ಆತ್ಮಹತ್ಯೆ

ಅರಕಲಗೂಡು : ಮೈಕ್ರೊ ಫೈನಾನ್ಸ್ ಕಿರಕುಳಕ್ಕೆ ಬೇಸತ್ತ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅರಕಲಗೂಡು ತಾಲ್ಲೂಕು ಕಳ್ಳಿಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೇಶವಯ್ಯ (50) ಮೃತರು. ಇವರು ಸೂರ್ಯೋದಯ ಫೈನಾನ್ಸ್‌ನಿಂದ 5 ಲಕ್ಷ, ಬೆಲ್ಟ್ ಸ್ಟಾರ್‌ ಮೈಕ್ರೋ‌ಫೈನಾನ್ಸ್‌ನಿಂದ 60 ಸಾವಿರ ಸಾಲ ಮಾಡಿದ್ದರು.

ಹಣ ಪಾವತಿಸುವಂತೆ ಸೂರ್ಯೋದಯ ಫೈನಾನ್ಸ್ ಸಿಬ್ಬಂದಿ ಮನೆಗೆ ನೋಟಿಸ್ ಅಂಟಿಸಿದ್ದರು. ನಂತರ ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿತ್ತು.

ಸಾಲ ನೀಡಲು ಮೃತ ಕೇಶವಯ್ಯ ರವರು ಸಾಲ ನೀಡದ ಹಿನ್ನೆಲೆ ಮೈಕ್ರೊ ಫೈನಾನ್ಸ್  ನ್ಯಾಯಾಲಯದಲ್ಲಿ ಪ್ರಕರಣ ಹಿನ್ನಲೆ ನ್ಯಾಯಾಲಯ ಮನೆ ಹಾರಜಿಗೆ ಆದೇಶಿತ್ತು, ಅಲ್ಲದೆ ಈ ಕುರಿತು ಮೈಕ್ರೊ ಫೈನಾನ್ಸ್ ನವರು ನೋಟಿಸ್ ಅಂಟಿಸಿದ್ದರು.

ಇದರಿಂದ ಮನನೊಂದು ರೈತ ವಿಷ ಸೇವಿಸಿ‌ ಆತ್ಮಹತ್ಯೆ 

ಅದರಿಂದ ‌ಮನನೊಂದಿದ್ದ ರೈತ ಕೇಶವಯ್ಯ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

                     News5kannada
                        Ravi Dummi 

Post a Comment

Previous Post Next Post