ಸ್ವಸ್ಥ ಸಮಾಜ ನಿರ್ಮಾಣ ಸಮಿತಿಯಿಂದ 50ಮಂದಿ ಮಹಿಳಾ ಸಾಧಕಿಯರಿಗೆ ಸನ್ಮಾನ

ಅರಕಲಗೂಡು : ಸ್ವಸ್ಥ ಸಮಾಜ ನಿರ್ಮಾಣ ಸಮಿತಿಯು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ 50ಮಂದಿ ಮಹಿಳಾ ಸಾಧಕಿಯರಿಗೆ ಸನ್ಮಾನ ಸಮಾರಂಭವನ್ನು ಮಾರ್ಚ್,3ರಂದು ತಾಲೂಕಿನ ರಾಮನಾಥಪುರ ಭಾಗ್ಯಶ್ರೀ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದೆ ಎಂದು ಸಮಿತಿ ಅಧ್ಯಕ್ಷ ಪ್ರದೀಪ್ ರಾಮಸ್ವಾಮಿ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಅಂದು ನಡೆಯುವ ಕಾರ್ಯಕ್ರಮವನ್ನು ಹಾಸನದ ಮಲ್ನಾಡ್ ನರ್ಸಿಂಗ್ ಹೋಮ್‌ನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಎ.ಸಾವಿತ್ರಿ ಉದ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ,ಸಹಾಯಕ ಕೃಷಿ ನಿರ್ದೇಶಕಿ ಕವಿತಾ,ವಲಯ ಅರಣ್ಯಾಧಿಕಾರಿ ಯಸ್ಮ ಮಾಚಮ್ಮ ಮತ್ತು ಆರಕ್ಷಕ ಉಪ ನಿರೀಕ್ಷಕಿ ಕಾವ್ಯ ಅವರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.

                  ಜಾಹಿರಾತು/Advertisement 
ತಾಲೂಕಿನಲ್ಲಿಯೇ ಮೊದಲ ಬಾರಿಗೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 50ಮಂದಿ ಮಹಿಳೆಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸುತ್ತಿರುವುದು ಮಹಿಳಾ ದಿನಾಚರಣೆಗೆ ಹೆಚ್ಚು ಅರ್ಥಕಲ್ಪಿಸುವುದಾಗಿದೆ.ಅಲ್ಲದೆ ನಮ್ಮ ಸ್ವಸ್ಥ ಸಮಾಜ ನಿರ್ಮಾಣ ಸಮಿತಿಯ ಮುಖ್ಯ ಉದ್ದೇಶವೂ ಕೂಡ ಇದೇ ಆಗಿದೆ ಎಂದರು.

ಈ ದೇಶಕ್ಕೆ ಅನ್ನ ಕೊಡುವ ರೈತ ಮತ್ತು ದುಡಿಯುವ ವರ್ಗಗಳಿಗೆ ಶಕ್ತಿ ತುಂಬಲು ನಿರ್ಧರಿಸಲಾಗಿದ್ದು, ಮುಂದಿನ ದಿನಗಳಲ್ಲಿ ವಿಶೇಷವಾಗಿ ಕಾರ್ಯಗಾರವನ್ನು ಹಮ್ಮಿಕೊಂಡು ತಜ್ಞರಿಂದ ತರಬೇತಿ,ಪ್ರಾತ್ಯಕ್ಷತೆಯನ್ನು ನೀಡುವ ಉದ್ದೇಶವನ್ನು ಹೊಂದಲಾಗಿದೆ.ಪ್ರಮುಖವಾಗಿ ಸಾವಯುವ ಮತ್ತು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವುದಾಗಿದೆ ಎಂದು ಹೇಳಿದರು.

                  ಜಾಹಿರಾತು/Advertisement 
ಸ್ವಸ್ಥ ಸಮಾಜ ನಿರ್ಮಾಣ ಸಮಿತಿಯನ್ನು ಕಳೆದ ಎರಡು ವರ್ಷಗಳ ಹಿಂದೆ ಸಮಾನ ಮನಸ್ಕರನ್ನೊಳಗೊಂಡಂತೆ ಸ್ಥಾಪಿಸಲಾಗಿದ್ದು,ಗಿಡ ಬೆಳೆಸಲು ಸೂಕ್ತ ಜಾಗ,ರಕ್ಷಣೆ ಇರುವ ಶಾಲಾ ಕಾಲೇಜು,ವಸತಿ ಶಾಲಾ ಆವರಣದಲ್ಲಿ ಸಾವಿರಾರು ಸಂಖ್ಯೆಯ ಗಿಡಗಳನ್ನು ನೆಡಲಾಗಿದೆ.ಅಲ್ಲದೆ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಕಾಳಜಿ,ರಕ್ಷಣೆ ಕುರಿತು ತಿಳುವಳಿಕೆಯನ್ನು ಸಹ ನೀಡುವ ಕಾರ್ಯವನ್ನು ಕೈಗೊಳ್ಳಲಾಗಿದೆ.ಕಳೆದ ಬಾರಿಯ ಗಣಪತಿ ಪ್ರತಿಷ್ಠಾಪನೆ ವೇಳೆ ಪರಿಸರ ಗಣಪ ಅಂದ್ರೆ ಮಣ್ಣಿನ ಗಣಪತಿ ಕುರಿತು ಜಾಗೃತಿ ಸಹ ಮೂಡಿಸಲಾಗಿದೆ.ಇದರ ಪರಿಣಾಮ ನೂರಾರು ಪರಿಸರ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿತ್ತು,ಪಟ್ಟಣದ ಶಿಕ್ಷಕರ ಭವನದಲ್ಲಿ ವಿವೇಕಾನಂದರ 162ನೇ ಜಯಂತಿ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಸಮಾಜ ವಿಜ್ಞಾನ ಶಿಕ್ಷಕರಿಗೆ ಸನ್ಮಾನಿಸಿ ಭವಿಷ್ಯದ ಮಕ್ಕಳನ್ನು ರೂಪಿಸಿಕೊಡುವಂತೆ ಮನವಿ ಮಾಡಲಾಯಿತು.ಹೀಗೆ ಸಮಿತಿ ವತಿಯಿಂದ ಮತ್ತೊಷ್ಟು ಸಮಾಜ ಮುಖಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಪ್ರದೀಪ್ ರಾಮಸ್ವಾಮಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಹಿರಿಯ ವಕೀಲ ಜನಾರ್ಧನ ಗುಪ್ತ, ಮುಖಂಡರಾದ ಬಸವರಾಜು,ಪಾಂಡುರಂಗ,ಮಾದೇಶ್,ನಸ್ರುಲ್ಲಾ ಟಿಪ್ಪು,ಸತೀಶ್ ಇತರರು ಉಪಸ್ಥಿತರಿದ್ದರು.
          ಫೋಟೋ-ಕ್ಯಾಪ್ಸನ್-ಅರಕಲಗೂಡಿನಲ್ಲಿ ಸ್ವಸ್ಥ ಸಮಾಜ                 ನಿರ್ಮಾಣ ಸಮಿತಿ ಪದಾಧಿಕಾರಿಗಳು ಸೋಮವಾರ                              ಪತ್ರಿಕಾಗೋಷ್ಠಿ ನಡೆಸಿದರು.


                            News5kannada 
                               Ravi Dummi 

Post a Comment

Previous Post Next Post