ಯಶಸ್ವಿಗೊಂಡ ಉದ್ಯೋಗಮೇಳ ; 40 ಕಂಪನಿಗಳಿಂದ 600 ಮಂದಿಗೆ ಉದ್ಯೋಗ ದೊರೆಯುವ ಭರವಸೆ

ಅರಕಲಗೂಡು : ತಾಲೂಕಿನ ಕೊಣನೂರು ಬಿಎಂಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶನಿವಾರ ಜರುಗಿದ ಬೃಹತ್ ಉದ್ಯೋಗಮೇಳದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದರು.

ಕೊಣನೂರು ಬಿಎಂಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು,ಅಭಿವೃದ್ಧಿ ಸಮಿತಿ,ಹಿರಿಯ ವಿದ್ಯಾರ್ಥಿ ಸಂಘ,ಉದ್ಯೋಗ ಮಾಹಿತಿ ಕೋಶದ ಸಹಯೋಗದೊಂದಿಗೆ ಶಾಸಕ ಎ.ಮಂಜು ಅವರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಉದ್ಯೋಗಮೇಳದಲ್ಲಿ ಹಾಸನ ಜಿಲ್ಲೆ,ಕೊಡಗು ಜಿಲ್ಲೆ,ಬೆಂಗಳೂರು,ಮೈಸೂರು ಸೇರಿದಂತೆ ದೂರದ ಊರುಗಳಿಂದ ಉದ್ಯೋಗ ಆಕಾಂಕ್ಷಿಗಳು ನೇರವಾಗಿ ತಮ್ಮ ವಿದ್ಯೆಗೆ ಅನುಗುಣವಾಗಿ ವಿವಿಧ ಕಂಪನಿಗಳ ಸಂದರ್ಶನ ಎದುರಿಸಿದರು.

ಮೊದಲ ಬಾರಿಗೆ ಗ್ರಾಮೀಣ ಪ್ರದೇಶದ ಕಾಲೇಜು ಮೈದಾನದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಬೆಂಗಳೂರಿನ 40ಕ್ಕೂ ಹೆಚ್ಚಿನ ಪ್ರತಿಷ್ಠಿತ ಕಂಪನಿಗಳ ಮಾನವ ಸಂಪನ್ಮೂನ ವಿಭಾಗದ ಅಧಿಕಾರಿಗಳು,ಸಿಬ್ಬಂದಿಗಳು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಭರವಸೆಯನ್ನು ಸ್ಥಳದಲ್ಲಿಯೇ ನೀಡಿದರು.ಈ ಪೈಕಿ 600ಕ್ಕೂ ಹೆಚ್ಚಿನ ಮಂದಿಗೆ ಒಂದುವಾರದಲ್ಲಿ ವಿದ್ಯೆ ಮತ್ತು ಅನುಭವಕ್ಕೆ ಅನುಗುಣವಾಗಿ ಉತ್ತಮ ವೇತನದೊಂದಿಗೆ ನೇಮಕಾತಿ ಪತ್ರ ದೊರೆಯಲಿದೆ.

                  ಜಾಹಿರಾತು/Advertisement 

ಬೆಳಗ್ಗೆ 10ಗಂಟೆಗೆ ಆರಂಭಗೊAಡ ಉದ್ಯೋಗ ಮೇಳವು ಸಂಜೆ ನಾಲ್ಕರ ತನಕವೂ ನಡೆಯಿತು.ಕಾಲೇಜಿನ ಪ್ರಾಂಶುಪಾಲ ರಾಜೀವ್,ಕಾರ್ಯಕ್ರಮ ಸಂಯೋಜಕ ಸುನಿಲ್,ಸಿಡಿಸಿ ಉಪಾಧ್ಯಕ್ಷ ಚೌಡೇಗೌಡ,ಇತರೆ ಉಪನ್ಯಾಸಕರು ಹಾಜರಿದ್ದು ಉದ್ಯೋಗಮೇಳ ಅನುಕೂಲಕರವಾಗಿ ನಡೆಯುವಂತೆ ನೋಡಿಕೊಂಡರು.ಭಾಗವಹಿಸಿದ್ದ ಎಲ್ಲಾ ಆಕಾಂಕ್ಷಿಗಳಿಗೆ ಮಧ್ಯಾಹ್ನದ ಉಪಾರ ವ್ಯವಸ್ಥೆಯನ್ನು ಮಾಡಲಾಗಿತ್ತು.

ಉದ್ಯೋಗ ಮೇಳದಲ್ಲಿ ಭಾಗವಹಿಸುವ ಆಕಾಂಕ್ಷಿಗಳಿಗೆ ಮೊದಲು ಆತ್ಮಸ್ಥೈರ್ಯ ಮತ್ತು ಭರವಸೆಯನ್ನು ನೀಡುವುದು ಅತೀ ಮುಖ್ಯವಾಗಿದೆ.ಇದನ್ನು ಕೊಣನೂರು ಕಾಲೇಜು ವತಿಯಿಂದ ಆಯೋಜನೆಮಾಡಿದ್ದ ಉದ್ಯೋಗ ಮೇಳದಲ್ಲಿ ಸಹಕಾರಗೊಂಡಿದೆ.ನಾನು ಎಂಜಿನಿಯರ್ ಪದವೀಧರಳಾಗಿದ್ದು,ನನ್ನ ವಿದ್ಯೆಗೆ ಅನುಗುಣವಾಗಿ ಪ್ರತಿಷ್ಠಿತ ಕಂಪನಿಯಿAದ ಕೆಲಸ ದೊರೆಯುವ ಭರವಸೆ ಸಿಕ್ಕಿದೆ.ಇದಕ್ಕಾಗಿ ಆಯೋಜಕರನ್ನು ಅಭಿನಂದಿಸುತ್ತೇನೆ.

.         ಸಿಂಚನ,ಬಿಇ ಪದವೀಧರೆ.ಸೋಮವಾರಪೇಟೆ,

ಹಳ್ಳಿಗಾಡಿನಲ್ಲಿ ಉದ್ಯೋಗಮೇಳ ಆಯೋಜನೆ ಮಾಡಿರುವುದು ಗ್ರಾಮೀಣ ಭಾಗದ ನಿರುದ್ಯೋಗಿ ಮಕ್ಕಳಿಗೆ ಉತ್ತೇಜಿತವಾಗಿದೆ.ಇಲ್ಲಿ ನನ್ನ ಮಗಳು ಕೂಡ ಭಾಗಿಯಾಗಿದ್ದಾಳೆ,ಮೊದಲ ಬಾರಿಗೆ ಉದ್ಯೋಗ ನೀಡುವ ಕಂಪನಿಗಳಿAದ ಹೆಚ್ಚಿನ ವೇತನ ನಿರೀಕ್ಷೆ ಮಾಡುವ ಬದಲು ಸಿಕ್ಕ ಕೆಲಸವನ್ನು ಕಣ್ಣಿಗೆ ಹಚ್ಚಿಕೊಂಡು ಮಾಡಿದರೇ ಮುಂದೆ ಅದೇ ದೊಡ್ಡಮಟ್ಟದಲ್ಲಿ ಫಲ ನೀಡಲಿದೆ.

.                     ಸೋಮೇಗೌಡ,ಸಿದ್ದಾಪುರ.

ಪೋಟೋ 1-ಕ್ಯಾಪ್ಸನ್-ಅರಕಲಗೂಡು ತಾಲೂಕಿನ ಕೊಣನೂರು ಬಿಎಂಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಶನಿವಾರ ನಡೆದ ಬೃಹತ್ ಉದ್ಯೋಗಮೇಳದಲ್ಲಿ ಭಾಗವಹಿಸಿದ್ದ ಉದ್ಯೋಗ ಆಕಾಂಕ್ಷಿಗಳೊAದಿಗೆ ಸಮಾಲೋಚನೆ ನಡೆಸುತ್ತಿರುವ ಕಂಪನಿಯ ಅಧಿಕಾರಿ.

Post a Comment

Previous Post Next Post