ಅರಕಲಗೂಡು : ಡಾ.ಬಿ.ಆರ್.ಅಂಬೇಡ್ಕರ್ ಕಲಾ ಮತ್ತು ಸಾಂಸ್ಕೃತಿಕ ಸಂಘವು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ ಅಂಗವಾಗಿ ಏಪ್ರಿಲ್.14ರಂದು ರಾತ್ರಿ 7ಗಂಟೆಗೆ ಪಟ್ಟಣದ ಶಿಕ್ಷಕರ ಭವನದ ಎದುರು ಶ್ರೀಜಗಜ್ಯೋತಿ ಬಸವೇಶ್ವರ ಪೌರಾಣಿಕ ನಾಟಕವನ್ನು ಹಮ್ಮಿಕೊಂಡಿದೆ ಎಂದು ಸಂಘದ ಮುಖಂಡ ಗಣೇಶ್ ವೇಲಾಪುರಿ ತಿಳಿಸಿದರು.
ಶುಕ್ರವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಾಟಕದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು,ಸಾಮಾನ್ಯವಾಗಿ ಅಂಬೇಡ್ಕರ್ ಜಯಂತಿ ಆಚರಣೆ ವೇಳೆ ಅವರ ಭಾವಚಿತ್ರವನ್ನು ಇಟ್ಟು ಗೌರವಿಸುವ ಮಹಾನ್ ಕಾರ್ಯ ನಡೆಯುತ್ತದೆ.ಆದರೆ ಈ ಬಾರಿ ಇಡೀ ರಾಜ್ಯದಲ್ಲಿಯೇ ಮೊದಲು ಎನ್ನಲಾದ ಶ್ರೀಜಗಜ್ಯೋತಿ ಬಸವೇಶ್ವರ ಜೀವನದ ಯೊಶೋಗಾತೆ,ಸಾಮಾಜಿಕ ಬದಲಾವಣೆ,ವಚನಗಳ ಮೂಲಕ ಸಮಾಜದ ಪರಿವರ್ತನೆಯನ್ನು ಒಳಗೊಂಡ ಅಂಶವನ್ನು ಮೈಗೂಡಿಸಿಕೊಂಡು ರಾಜ್ಯ ಪ್ರಶಸ್ತಿ ಪುರಸ್ಕçತರಾದ ಕುಬೇರಯ್ಯ ಅವರ ನಿರ್ದೇಶನದಲ್ಲಿ ಈ ನಾಟಕ ಮೂಡಿಬಂದಿದೆ.ಇದೊAದು ಹೊಸ ಪ್ರಯತ್ನದಲ್ಲಿ ಮೂಡಿಬಂದಿರುವ ನಾಟಕವನ್ನು ಅಂಬೇಡ್ಕರ್ ಜಯಂತಿಯAದು ಪ್ರದರ್ಶನಮಾಡಿ ಅರ್ಥಪೂರ್ಣವಾಗಿ ಜನ ಜಾಗೃತಿ ಮೂಡಿಸುವ ಪ್ರಮುಖ ಅಂಶವನ್ನು ಒಳಗೊಂಡಿದೆ ಎಂದು ಹೇಳಿದರು.
ರಂಗ ಕಲಾವಿದರು ಹಾಗೂ ನಾಟಕದ ಪ್ರಮುಖ ರೂವಾರಿ ಗರೀಘಟ್ಟ ಕೇಶವ ಮಾತನಾಡಿ,ನಮ್ಮ ಸಂಘದ ವತಿಯಿಂದ ಸಾಕಷ್ಟು ನಾಟಕಗಳನ್ನು ಹಮ್ಮಿಕೊಂಡು ಜನರಿಗೆ ಮನರಂಜನೆ,ಅರಿವು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮೂಡಿಸಲಾಗುತ್ತಿದೆ.ನಮ್ಮ ಪ್ರಯತ್ನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮೆಚ್ಚುಗೆ,ಪ್ರೋತ್ಸಾಹ ದೊರೆಯುತ್ತಿಲ್ಲದಿರುವುದು ನೋವಿನ ಸಂಗತಿಯಾಗಿದೆ.ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಜಯಂತಿಯಂದು ಈ ಸಮಾಜದಲ್ಲಿ ಅಸಮಾನತೆ,ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಸಮಾ ಸಮಾಜ ನಿರ್ಮಾಣವನ್ನು ಮೊದಲ ಬಾರಿಗೆ ನಿರ್ಮಿಸಿಕೊಟ್ಟ ಅಣ್ಣ ಬಸವಣ್ಣನರ ಜೀವನ,ಹೋರಾಟ ಕುರಿತ ಅಂಶಗಳನ್ನು ಈ ನಾಟಕ ಒಳಗೊಂಡಿದೆ.ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಬೆಂಬಲಿಸಬೇಕೆAದು ಮನವಿ ಮಾಡಿದರು.
ಈ ವಿನೂತನ ನಾಟಕ ಪ್ರದರ್ಶನದ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಜನಪ್ರೀಯ ಶಾಸಕರಾದ ಎ.ಮಂಜು ಅವರು ವಹಿಸಲಿದ್ದು,ಸಂಸದ ಶ್ರೇಯಸ್ ಎಂ.ಪಟೇಲ್,ಕಾಂಗ್ರೆಸ್ ಮುಖಂಡ ಚೋಳೇನಹಳ್ಳಿ ಸುರೇಶ್ ಉದ್ಘಾಟಿಸುವರು.ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಂ.ಸುರೇಶ್,ಪ್ರದೀಪ್ ರಾಮಸ್ವಾಮಿ,ಪ್ರಸನ್ನಕುಮಾರ್,ಸಿಂಗನಕುಪ್ಪೆ ಸುರೇಶ್,ನಾಗರಾಜು ಹಾಗೂ ಇತರರು ಭಾಗವಹಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ದೇವರಾಜ್,ರವಿ ಗರಿಘಟ್ಟ,ಚನ್ನಯ್ಯ ಉಪಸ್ಥಿತರಿದ್ದರು.
. ಕ್ಯಾಪ್ಸನ್-ಅರಕಲಗೂಡಿನಲ್ಲಿ ಅಂಬೇಡ್ಕರ್ ಕಲಾ ಮತ್ತು ಸಾಂಸ್ಕೃತಿಕ ಸಂಘದ ಮುಖಂಡರು ಜಗಜ್ಯೋತಿ ಬಸವೇಶ್ವರ ನಾಟಕದ ಪೋಸ್ಟರ್ ಬಿಡುಗಡೆಮಾಡಿದರು.
News5Kannada
Ravi Dummi
Tags
ಅರಕಲಗೂಡು