ಯಗಟಿ- ಐವರಿಗೆ ಅನಧಿಕೃತ ಸಾಗುವಳಿ ಚೀಟಿ ವಿತರಣೆ ; ಕಂದಾಯ ಅಧಿಕಾರಿ,ಸಿಬ್ಬಂಧಿಗಳಿಗೆ ನೋಟಿಸ್ ಜಾರಿ - ಎಸಿ ಶ್ರುತಿ

ಅರಕಲಗೂಡು : ತಾಲೂಕಿನ ಯಗಟಿ ಗ್ರಾಮದ ಸರ್ವೆನಂಬರ್ 154 ಮತ್ತು 36ರಲ್ಲಿ ಐದು ಮಂದಿಗೆ ಭೂ ಮಂಜೂರಾತಿ ಆದೇಶವನ್ನು ಅಧಿಕೃತವಾಗಿ ನೀಡಿರುವ ಬಗ್ಗೆ ಯಾವುದೇ ದಾಖಲೆ ಇಲ್ಲ.ಆದರೆ ಸಾಗುವಳಿ ಚೀಟಿ ವಿತರಣಾ ವಹಿಯಲ್ಲಿ ಈ ಐದುಮಂದಿ ಹೆಸರು ಇರುವುದು ಕಂಡುಬAದಿದೆ.ಈ ಬಗ್ಗೆ ಸಂಬAಧಪಟ್ಟ ತಹಸೀಲ್ದಾರ್,ಕಂದಾಯ ಅಧಿಕಾರಿ ಮತ್ತು ಕೇಸ್‌ವರ್ಕ್ರಗೆ ನೋಟಿಸ್ ಜಾರಿಮಾಡಲಾಗಿದೆ ಎಂದು ಸಕಲೇಶಪುರ ಉಪ ವಿಭಾಗಾಧಿಕಾರಿ ಶ್ರುತಿ ತಿಳಿಸಿದರು.

ಶುಕ್ರವಾರ ತಾಲೂಕು ಕಚೇರಿಯಲ್ಲಿ ನ್ಯೂಸ್5 ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಕಳೆದ 2023ರ ಮಾರ್ಚ್ 29ರಂದು ಯಾವುದೇ ಬಗರ್ ಹುಕುಂ ಕಮಿಟಿ ಸಭೆ ನಡೆದಿಲ್ಲ.ಆದರೆ 2023ರ ಜೂನ್ 7ರಂದು ಸಾಗುವಳಿ ಚೀಟಿ ನೀಡಿದ ದಿನಾಂಕ ಎಂದು ಇದೆ.ಈ ದಾಖಲೆಗಳು ಕಚೇರಿಯಲ್ಲಿಲ್ಲ.ಆದರೆ ಸಾಗುವಳಿ ಚೀಟಿ ವಿತರಣಾ ವಹಿಯಲ್ಲಿ ಮಾತ್ರ ಯಗಟಿ ಗ್ರಾಮದ ಐದುಮಂದಿಯ ಹೆಸರು ಇದೆ.ಈ ಹೆಸರುಗಳನ್ನು ರೌಂಡ್ ಸಹ ಮಾಡಲಾಗಿದೆ.ಹಿಂದಿನ ತಹಸೀಲ್ದಾರ್ ಆಗಿದ್ದ ಮೋಹನ್‌ಕುಮಾರ್ ಅವರು ಕೂಡ ಈ ಅವಧಿಯಲ್ಲಿ ಇಲ್ಲ.2023ರ ಮಾರ್ಚ್ 3ರಂದು ಅರಕಲಗೂಡು ಕಚೇರಿಯಿಂದ ಬಿಡುಗಡೆಯಾಗಿರುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.ಅಲ್ಲದೆ ಆ ಸಹಿ ನನ್ನದಲ್ಲ ಎಂದು ಪೊಲೀಸ್ ಹಾಗೂ ನಮಗೂ ಸಹ ದೂರು ಕೊಟ್ಟಿದ್ದಾರೆ.ಮಂಜೂರಾತಿ ಆದೇಶ ಪ್ರತಿಯಲ್ಲಿರುವ ಸಹಿ ಅವರದೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವ ಸಲುವಾಗಿ ಮಾನ್ಯ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗುವುದು.
                  ಜಾಹಿರಾತು/Advertisement
ಅಲ್ಲದೆ ಇಸ್ಸು ರಿಜಿಸ್ಟರ್‌ನಲ್ಲಿನ ಹ್ಯಾಂಡ್ ರೈಟಿಂಗ್ ಯಾರದು ಎಂಬುದನ್ನು ಸಹ ತಿಳಿದುಕೊಳ್ಳುವ ಸಲುವಾಗಿ ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸುವ ಕೆಲಸ ನಡೆದಿದೆ.ಹಾಗೆಯೇ 2023 ಮಾರ್ಚ್ನಿಂದ ಇಲ್ಲಿಯ ತನಕ ಆರ್‌ಆರ್‌ಟಿ,ರೆಕಾರ್ಡ್ ರೂಂ ಹಾಗೂ ಬಗರ್ ಹುಕುಂ ಕೇಸ್ ವರ್ಕರ್‌ಗಳ ಮೇಲೆಯೂ ನಿಗಾ ಇಟ್ಟಿದ್ದು ಅವರಿಗೂ ಕೂಡ ತಹಸೀಲ್ದಾರ್ ಇಂದ ನೊಟೀಸ್ ಸಹ ಕೊಡಲಾಗಿದೆ.ಇವರ ಮೇಲೆಯೂ ಕೂಡ ಇಲಾಖಾ ವಿಚಾರಣೆ ಮಾಡಿ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ಈ ಸರ್ವೇನಂಬರ್‌ಗಳಲ್ಲಿ ಭೂಮಿ ಪಡೆದಿದ್ದಾರೆ ಎಂದು ಹೇಳಲಾಗುವ ಯಗಟಿ ಗ್ರಾಮದ ಐದುಮಂದಿಗೂ ಸಹ ನೊಟೀಸ್ ನೀಡಲಾಗಿದೆ.ಇವರ ಮೇಲೆಯೂ ಕೂಡ ವಿಚಾರಣೆ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಶಿರಸ್ತೇದಾರ್ ಸೋಮಶೇಖರ್,ಉಜ್ವಲ್‌ಕುಮಾರ್ ಇದ್ದರು.


.        ಕ್ಯಾಪ್ಸನ್-ಅರಕಲಗೂಡಿನ ತಹಸೀಲ್ದಾರ್ ಕಚೇರಿಯಲ್ಲಿ                      ಶುಕ್ರವಾರ ಎಸಿ ಶ್ರುತಿ ಅವರು ಮಾತನಾಡಿದರು

                          News5kannada 
                             Ravi Dummi

Post a Comment

Previous Post Next Post