ಅರಕಲಗೂಡು : ಅಡುಗೆ ಸಿಲಿಂಡರ್ ಸ್ಪೋಟಗೊಂಡು ಮನೆಯಲ್ಲಿನ ವಸ್ತುಗಳೊಂದಿಗೆ ಇಡೀ ಮನೆ ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ಪಟ್ಟಣದ ವಿನಾಯಕ ನಗರದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಶಿಕ್ಷಕ ಜರ್ನಾಧನ್ ಅವರಿಗೆ ಸೇರಿದ ಮನೆಯಾಗಿದ್ದು,ಹಾಸನ ಪಿಯು ಕಾಲೇಜಿನ ಸಿಬ್ಬಂದಿ ಪ್ರೇಮಿಳಾ ಎಂಬುವರು ಬಾಡಿಗೆಗೆ ವಾಸವಾಗಿದ್ದರು.ಇಂದು ಬೆಳಗ್ಗೆ ತಿಂಡಿ ಮುಗಿಸಿ ಕೆಲಸಕ್ಕೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.ಸಿಲಿAಡರ್ ಸ್ಪೋಟಗೊಂಡ ರಭಸಕ್ಕೆ ಮನೆಯ ಮೇಲ್ಚಾವಣಿ ಹಾರಿ ಹೋಗಿದೆ.ಇಡೀ ಮನೆಯಲ್ಲಿನ ವಸ್ತುಗಳು ಬೆಂಕಿಗೆ ಆಹುತಿಯಾಗಿ ಕರಕಲಾಗಿವೆ.ಮನೆಯಲ್ಲಿ ಯಾರು ಇಲ್ಲದ ಪರಿಣಾಮ ಸಾವುನೋವು ಸಂಭವಿಸಿಲ್ಲ.
ಜಾಹಿರಾತು/Advertisement
ಸಕಾಲಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.ಅಲ್ಲದೆ ಅಗ್ನಿಶಾಮಕ ಸಿಬ್ಬಂದಿ ಭೇಟಿನೀಡಿ ಬೆಂಕಿಯನ್ನು ನಂದಿಸಿದ್ದಾರೆ.ಇಲ್ಲದಿದ್ದರೇ ಅಕ್ಕಪಕ್ಕದ ಮನೆಗಳಿಗೆ ಬೆಂಕಿ ವ್ಯಾಪಿಸಿ ಭಾರಿ ಅನಾಹುತ ಉಂಟಾಗುತ್ತಿತ್ತು.
ಎರಡನೇ ಅಂತಸ್ತಿನ ಮನೆಯಾಗಿದ್ದು,ಇಡೀ ಮನೆ,ವಸ್ತುಗಳು ಸುಟ್ಟುಹೋಗಿರುವುದರಿಂದ 25ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ ಎಂದು ಮನೆಯ ಮಾಲೀಕ ಜರ್ನಾಧನ್ ಪೊಲೀಸರು,ಅಗ್ನಿಶಾಮಕ ದಳದವರಿಗೆ ದೂರು ನೀಡಿದ್ದಾರೆ.
Tags
ಅರಕಲಗೂಡು