ಅರಕಲಗೂಡು : ತಾಲೂಕಿನ ಪುರಾಣ ಪ್ರಸಿದ್ಧ ದಾಸನಪುರ ಗ್ರಾಮದ ಶ್ರೀರಂಗನಾಥಸ್ವಾಮಿ ಬೆಟ್ಟದಲ್ಲಿ ವಿಶ್ವ ಮನನಿ ಚಾರಿಟಬಲ್ ಟ್ರಸ್ಟ್,ಮಲ್ಲಿಪಟ್ಟಣ ವತಿಯಿಂದ ಶ್ರೀಪಂಚಮುಖಿ ಆಂಜನೇಯಸ್ವಾಮಿ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನ ಉದ್ಘಾಟನಾ ಸಮಾರಂಭವು ಜ.28ರಿಂದ29ರ ತನಕ ಜರುಗಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷರಾಗಿ ಖ್ಯಾತ ವೈದ್ಯ ಡಾ.ಹೆಚ್.ಎಲ್.ವಿಶ್ವನಾಥ್ ತಿಳಿಸಿದರು.
ಜಿಲ್ಲೆಯಲ್ಲಿನ ಹನುಮಂತಪುರ ಗ್ರಾಮದಲ್ಲಿ ಪಂಚಮುಖಿ ಆಂಜನೇಯ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ.ತಾಲೂಕಿನಲ್ಲಿ ಸ್ಥಾಪನೆಯಾಗುತ್ತಿರುವ 5ಅಡಿಯ ಪಂಚಮುಖಿ ಆಂಜನೇಯ ಮೂರ್ತಿ ತಮಿಳುನಾಡಿನ ಶ್ರೀಕೃಷ್ಣ ಶಿಲೆಯಿಂದ ನಿರ್ಮಾಣಗೊಂಡಿದೆ.ವಿಶೇಷವಾಗಿ ಈ ದೇವರ ಮೂರ್ತಿಯನ್ನು ಆಯೋದ್ಯೆ ರಾಮನ ಮೂರ್ತಿಯನ್ನು ಕೆತ್ತನೆಮಾಡಿರುವ ನಮ್ಮವರೇ ಆಗಿರುವ ಮೈಸೂರಿನ ಶ್ರೀಅರುಣ್ ಯೋಗಿರಾಜ್ ಅವರಿಂದ ಕೆತ್ತನೆಗೊಂಡಿದೆ ಎಂದು ಹೇಳಿದರು.
ದಾಸನಪುರ ಬೆಟ್ಟದಲ್ಲಿ ಪುರಾಣ ಪ್ರಶಿದ್ಧ ಶ್ರೀರಂಗನಾಥಸ್ವಾಮಿಯವರ ದೇವಾಲಯವಿದೆ.ವರ್ಷಕ್ಕೆ ಒಮ್ಮೆ ಅದ್ಧೂರಿ ರಥೋತ್ಸವ ಅಪಾರ ಸಂಖ್ಯೆಯ ಭಕ್ತರೊಂದಿಗೆ ಜರುಗಲಿದೆ.ಇದೆ ಬೆಟ್ಟಕ್ಕೆ ಕಾಲುನಡೆಗೆ ಅಥವಾ ವಾಹನಗಳಲ್ಲಿ ತೆರಳುವ ಮಾರ್ಗದ ಮಧ್ಯೆದಲ್ಲಿ ಈ ನೂತನ ಪಂಚಮುಖಿ ಆಂಜನೇಯ ದೇವಸ್ಥಾನ ನಿರ್ಮಾಣಗೊಳ್ಳುತ್ತಿರುವುದು ಭಕ್ತರಿಗೆ ಆರಂಭದಲ್ಲಿಯೇ ಭಗವಾನ್ ಬಾಹುಬಲಿ ಮೂರ್ತಿಯ ದರ್ಶನ ದೊರೆಯಲಿದೆ.ಆಧುನಿಕ ಶೈಲಿಯಲ್ಲಿ ದೇವಸ್ಥಾನ ನಿರ್ಮಾಣಗೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.
ಜ.28ರಂದು ಸಂಜೆ ನೂತನ ದೇವಾಲಯದಲ್ಲಿ ಗಣಪತಿ ಪೂಜೆ,ದೇವನಾಂದಿ ಕಂಕಣ ದಾರಣೆ,ಕಲಸ ಪ್ರತಿಸ್ಠಾಪನೆ, ಹೋಮ,ಮಹಾಬಲ,ಜಲಾದಿವಾಸ,ಕ್ಷೀರಾಧಿವಾಸ,ಶಯಾಧಿವಾಸ ನಂತರ ಮಹಾ ಮಂಗಳಾರತಿ ನಡೆಯಲಿದೆ. ಜ.29ರಂದು ಬೆಳಗ್ಗೆ 10,30ಕ್ಕೆ ಮಂಚಮುಖಿ ಆಂಜನೇಯ ದೇವಸ್ಥಾನ ಲೋಕಾರ್ಪಣೆ ಹಾಗೂ ಮಂಚಮುಖಿ ಆಂಜನೇಯ ಸ್ವಾಮಿ ಪ್ರತಿಷ್ಠಾಪನೆ ಬಳಿಕ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.ಪರಮ ಪೂಜ್ಯರಾದ ಶ್ರೀಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ,ಶ್ರೀಮಲ್ಲಿಕಾರ್ಜುನಸ್ವಾಮೀಜಿ,ಶ್ರೀಬಸವರಾಜೇಂದ್ರ ಸ್ವಾಮೀಜಿ, ಶ್ರೀಮಹಾಂತ ಶಿವಲಿಂಗಸ್ವಾಮೀಜಿ,ಶ್ರೀಮಹಾಂತ ಸ್ವಾಮೀಜಿ ಅವರು ಆರ್ಶೀವಚನ ನೀಡಲಿದ್ದಾರೆ.ಕ್ಷೇತ್ರದ ಶಾಸಕರಾದ ಎ.ಮಂಜು ಅಧ್ಯಕ್ಷತೆ ವಹಿಸಲಿದ್ದು,ಮಾಜಿ ಸಚಿವರು,ಹಾಲಿ ಶಾಸಕರಾದ ಹೆಚ್.ಡಿ.ರೇವಣ್ಣ ಉದ್ಘಾಟಿಸುವರು,ವಿಶೇಷ ಆಹ್ವಾನಿತರಾಗಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಸೇರಿದಂತೆ ಇತರೆ ಗಣ್ಯರು ಭಾಗವಹಿಸಲಿದ್ದಾರೆ.ಕಾರ್ಯಕ್ರಮ ಬಳಿಕ ಎಲ್ಲಾ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಮಲ್ಲಿಪಟ್ಟಣ ಹೋಬಳಿಯ ಎಲ್ಲಾ ಗ್ರಾಮಗಳ ಭಕ್ತರು ಈ ಒಂದು ಸತ್ಕಾರ್ಯದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಅವರು ಮನವಿ ಮಾಡಿದರು.
ಫೋಟೋ ಕ್ಯಾಪ್ಸನ್ -ಅರಕಲಗೂಡು ತಾಲೂಕು ದಾಸನಪುರ ಗ್ರಾಮದ ಶ್ರೀರಂಗನಾಥಸ್ವಾಮಿ ಬೆಟ್ಟದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀಪಂಚಮುಖಿ ಆಂಜನೇಯ ಮೂರ್ತಿ.
ಫೋಟೋ ಕ್ಯಾಪ್ಸನ್-ದಾಸನಪುರ ಶ್ರೀರಂಗನಾಥ ಸ್ವಾಮಿ ಬೆಟ್ಟದಲ್ಲಿ ನೂತನ ಪಂಚಮುಖಿ ಆಂಜನೇಯ ದೇವಸ್ಥಾನ ನಿರ್ಮಾಣ ಕಾರ್ಯ ಭರದಿಂದ ಸಾಗಿರುವುದು.
ನ್ಯೂಸ್ 5 - ರವಿ ದುಮ್ಮಿ
Tags
ಮಲ್ಲಿಪಟ್ಟಣ