ಅರಕಲಗೂಡು : ತಾಲೂಕಿನ ದಾಸನಪುರ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ವಿಶ್ವ ಮನನಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ರೀಪಂಚಮುಖಿ ಆಂಜನೇಯಸ್ವಾಮಿ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನ ಲೋಕಾರ್ಪಣೆ ಗುರುವಾರ ಅದ್ಧೂರಿಯಾಗಿ ಜರುಗಿತು.
ಅರಕಲಗೂಡು ದೊಡ್ಡಮಠಾಧೀಶ ಶ್ರೀಮಲ್ಲಿಕಾರ್ಜುನಸ್ವಾಮೀಜಿ,ಶ್ರೀಬಸವರಾಜೇಂದ್ರ ಸ್ವಾಮೀಜಿ,ಶ್ರೀಮಹಾಂತ ಸ್ವಾಮೀಜಿ ಅವರು ದೇವರ ಪ್ರತಿಷ್ಠಾಪನಾ ಪೂಜಾ ಕಾರ್ಯದಲ್ಲಿ ಭಾಗವಹಿಸಿ ಭಕ್ತರಿಗೆ ಆರ್ಶೀವಚನ ನೀಡಿದರು.
ದೇವಾಲಯ ಉದ್ಘಾಟನೆ ಅಂಗನವಾಗಿ ವಿವಿಧ ಪೂಜಾ ವಿಧಾನಗಳು ವಿಧಿವತ್ತಾಗಿ ನಡೆದವು.ಗಂಗಾಪೂಜೆ ಕುಂಭ ಕಳಸದೊಂದಿಗೆ ಮೆರವಣಿಗೆ,ಕಲಶಾಭಿಷೇಕ,ಮಹಾ ಮಂಗಳಾರತಿ,ಮಹಾ ಪೂರ್ಣಾಹುತಿ ನಡೆಯಿತು.
ದಾಸನಪುರ ಸೇರಿದಂತೆ ಸುತ್ತಾಮುತ್ತಲ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡ್ಡು ದೇವರ ದರ್ಶನ ಪಡೆದರು.ಎಲ್ಲಾ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.
ಶ್ರೀಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದ ನಿರ್ಮಾಣ,ಪ್ರತಿಷ್ಠಾಪನೆ ಹಾಗೂ ಇತರೆ ಅಭಿವೃದ್ಧಿಯನ್ನು ವಿಶ್ವ ಮನನಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಖ್ಯಾತ ವೈದ್ಯ ಡಾ.ವಿಶ್ವನಾಥ್ ಅವರು ಸ್ವಯಂಪ್ರೇರಿತವಾಗಿ ನಿರ್ವಹಿಸಿದ್ದಾರೆ.ಈ ಭಗವಂತನ ಪುಣ್ಯಕಾರ್ಯದಲ್ಲಿ ಅವರು ಇಡೀ ಕುಟುಂಬ ಜತೆಯಾಗಿ ನಿಂತ್ತು ಸಹಕರಿಸಿದೆ.ಇವತ್ತಿನ ಆಧುನಿಕ ಕಾಲದಲ್ಲಿ ಲಕ್ಷಾಂತರರೂ ವ್ಯಯಮಾಡಿ ಸಮಾಜಕ್ಕೆ ದೇವಾಲಯ ನಿರ್ಮಾಣ ಮಾಡುವ ಪುಣ್ಯ ಕಾರ್ಯವನ್ನುಮಾಡುವವರು ವಿರಳ ಎನ್ನಬಹುದು.ಆದರೆ ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ವಿಶ್ವನಾಥ್ ಅವರು ಸರಕಾರ ಅಥವಾ ಇತರೆ ಯಾವುದೇ ಮೂಲದಿಂದಲೂ ಆರ್ಥಿಕ ನೆರವು ಪಡೆಯದೇ ತಮ್ಮ ಕುಟುಂಬದ ಚಾರಿಟಬಲ್ ಟ್ರಸ್ಟ್ ಮೂಲಕ ಇಂತಹ ಮಹಾನ್ ಕಾರ್ಯವನ್ನು ಒಬ್ಬಂಟಿಯಾಗಿ ನಿರ್ವಹಿಸಿದ್ದಾರೆ. ದಾಸನಪುರ ಹಾಗೂ ಸುತ್ತಾಮುತ್ತಲ ಗ್ರಾಮಸ್ಥರು ಡಾ.ವಿಶ್ವನಾಥ್ ದಂಪತಿಯನ್ನು ಸನ್ಮಾನಿಸಿದರು.ಮುಖಂಡರಾದ ಬೆಮ್ಮತ್ತಿ ಸುರೇಶ್,ಮಾಗೋಡು ಬಸವರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.
ಅರಕಲಗೂಡು ತಾಲೂಕು ದಾಸನಪುರ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನೂತನ ಶ್ರೀಪಂಚಮುಖಿ ಆಂಜನೇಯಸ್ವಾಮಿ ದೇವಾಲಯ ಗುರುವಾರ ಲೋಕಾರ್ಪಣೆಗೊಂಡಿತು.
ದಾಸನಪುರ ಗ್ರಾಮದ ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನೂತನ ಶ್ರೀಪಂಚಮುಖಿ ಆಂಜನೇಯಸ್ವಾಮಿ ದೇವಾಲಯ ನಿರ್ಮಿಸಿಕೊಟ್ಟ ಖ್ಯಾತ ವೈದ್ಯ ಡಾ.ವಿಶ್ವನಾಥ್ ದಂಪತಿಯನ್ನು ಗ್ರಾಮಸ್ಥರು ಗೌರವಿಸಿದರು.
News5 - Ravi Dummi
Tags
ಮಲ್ಲಿಪಟ್ಟಣ