ಅರಕಲಗೂಡು: ತಾಲೂಕಿನ ಮುಂಡಗೋಡು ಗ್ರಾಮದಲ್ಲಿ ಕಾಣೆಯಾಗಿದ್ದ ರೈತ ಸಾಲಬಾಧೆ ತಾಳಲಾರದೆ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದ ಚನ್ನೇಗೌಡ ಆತ್ಮಹತ್ಯೆ ಗೆ ಶರಣಾದ ರೈತ. ಹುಲಿಕಲ್ ಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ 263,000 ಸಾಲ ಪಡೆದಿದ್ದು ಹಿಂದೂಜಾ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನಲ್ಲಿ ಹೌಸಿಂಗ್ ಲೋನ್ 8 ಲಕ್ಷ ಹಿಂದೂ ಸಿಂಧ್ ಬ್ಯಾಂಕ್ ನಲ್ಲಿ ಟ್ರ್ಯಾಕ್ಟರ್ ಲೋನ್ 4,06,277 ರೂ ಒಟ್ಟು ಸುಮಾರು 14.69, 277/ರೂ ಗಳ ಸಾಲ ಪಡೆದಿದ್ದರು. ಸಾಲಕ್ಕೆ ಹೆದರಿ ಕಳೆದ ಬುಧವಾರ ಮನೆಯಿಂದ ಹೊರ ಹೋಗಿದ್ದ ರೈತ ಮುಂಡುಗೋಡು ನಾಲೆಗೆ ಬಿದ್ದರು. ಶನಿವಾರ ಮಾದಾಪುರ ಬಳಿ ನಾಲೆಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಅರಕಲಗೂಡು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿ ಶವ ಪರೀಕ್ಷೆ ನಡೆಸಲಾಯಿತು.
ಸ್ಥಳಕ್ಕೆ ಸಕಲೇಶಪುರ ಉಪ ವಿಭಾಗ ಸಕಲೇಶಪುರದ ಉಪ ವಿಭಾಗಾಧಿಕಾರಿ ರಾಜೇಶ್, ತಹಸೀಲ್ದಾರ್ ಕೆ.ಸಿ. ಸೌಮ್ಯ, ರವರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರ ಕೊಡಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.
Tags
ಅರಕಲಗೂಡು