ಅರಕಲಗೂಡು : ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಜೀವನ ಶೈಲಿ ಬದಲಾಯಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಕೊಣನೂರು ಸಮುದಾಯ ಆರೋಗ್ಯ ಕೇಂದ್ರದ ಎನ್.ಸಿ.ಡಿ. ವಿಭಾಗದ ಅಪ್ತ ಸಮಾಲೋಚಕ ಕಮಲೇಶ್ ಹೇಳಿದರು.
ತಾಲೂಕಿನ ಕೊಣನೂರು ಮೌಲನಾ ಅಜಾದ್ ಮಾದರಿ ಶಾಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಎನ್.ಸಿ.ಡಿ. ವಿಭಾಗದ ಸಹಯೋಗದಲ್ಲಿ ಶುಕ್ರವಾರ ನಡೆದ ಆರೋಗ್ಯ ಅರಿವು ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು ಮಕ್ಕಳು ಮತ್ತು ಯುವಕರೇ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ. ಹೃದಯಾಘಾತ ಪ್ರಕರಣಗಳು ಕುರಿತು ಯಾರೂ ಕೂಡ ಭಯ ಪಡುವುದು ಬೇಡ. ನಿಯಮಿತವಾಗಿ ಪೌಷ್ಠಿಕಾಂಶ ಆಹಾರ ಪದ್ದತಿ ಅನುಸರಿಸಿ ನಿತ್ಯ ವ್ಯಾಯಾಮ, ಯೋಗಾಸನ ಮಾಡಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು ಗೋಬಿ, ಪಾನಿಪೂರಿ, ಜಂಕ್ ಫುಡ್ ಗಳನ್ನು ತ್ಯಜಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಶಿಕ್ಷಣದಷ್ಟೇ ಆರೋಗ್ಯ ಶಿಕ್ಷಣದ ಕಡೆಗೂ ಕಾಳಜಿ ವಹಿಸಬೇಕು ಎಂದರು.
ಮುಖ್ಯ ಶಿಕ್ಷಕ ವಿಶ್ವನಾಥ್, ಸಹ ಶಿಕ್ಷಕರಾದ ಚೇತನ್, ದರ್ಶನ್, ಸಮೀರ, ಪ್ರೀತಿ, ಆಸ್ಪೀಯಾ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.
ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಸಾರ್ವಜನಿಕರುಗೆ ಆರೋಗ್ಯದ ಕುರಿತು ಅರಿವು ಮೂಡಿಸಿದರು.
Tags
ಕೊಣನೂರು