ಹನ್ಯಾಳು : ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಸುಕನ್ಯಾ ರಾಮಚಂದ್ರ ಅವಿರೋಧ ಆಯ್ಕೆ

ಅರಕಲಗೂಡು : ತಾಲ್ಲೂಕಿನ ಹನ್ಯಾಳು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಸುಕನ್ಯಾ ರಾಮಚಂದ್ರ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಸಂಗೀತ ಮಂಜುನಾಥ್  ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಾಗಿತ್ತು. ತೆರವಾಗಿದ್ದ ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ಸೋಮವಾರ ಚುನಾವಣೆ ನಡೆಯಿತು.

ಬಿಜೆಪಿ ಹಾಗೂ ಜೆಡಿ‌ಎಸ್ ಮೈತ್ರಿ ಬೆಂಬಲಿತ ಸದಸ್ಯ ಸುಕನ್ಯಾ ರಾಮಚಂದ್ರ ಹೊರತುಪಡಿಸಿ ಬೇರೆ ಯಾವುದೇ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 12ಸದಸ್ಯರು ಇರುವ ಗ್ರಾ.ಪಂನಲ್ಲಿ ಬಿಜೆಪಿ, ಜೆಡಿ‌ಎಸ್ ಬೆಂಬಲಿತ 11 ಸದಸ್ಯರು ಹಾಜರಾಗಿದ್ದರು. ಕಾಂಗ್ರೆಸ್ ಬೆಂಬಲಿತ ಓರ್ವ ಸದಸ್ಯರು ಗೈರಾಗಿದ್ದರು.

ಚುನಾವಣಾಧಿಕಾರಿಯಾಗಿ ಇಒ ಶ್ರೀನಿವಾಸ್ ಕರ್ತವ್ಯ ನಿರ್ವಹಿಸಿದರು.

ನೂತನ ಅಧ್ಯಕ್ಷ ಕೆ.ಆರ್.ಕೃಷ್ಣ ಮಾತನಾಡಿ, ತಮ್ಮ ಅಧಿಕಾರ ಅವಧಿಯಲ್ಲಿ ಪ್ರಥಮವಾಗಿ ಮೂಲಭೂತ ಸಮಸ್ಯೆಗಳಿಗೆ ವಿಶೇಷ ಗಮನಹರಿಸಲಾಗುವುದು ಎಂದರು.

ಮಾಜಿ ಅಧ್ಯಕ್ಷೆ ಪಾರ್ವತಮ್ಮ, ಸಂಗೀತಾ ಮಂಜುನಾಥ್, ಅನಸೂಯ ಸ್ವಾಮಿಗೌಡ,ರಮೇಶ್,ಮಂಜು,ಸೋಂಪುರ , ಗುಂಡಣ್ಣ,ಶಾಂತ ,ಮಾಧು,ಶಂಕರ್,
ಕಾವೇರಮ್ಮ , ಸ್ವಾಮಿಗೌಡ,ರಾಮಚಂದ್ರ,ಪಿಎಸಿಸಿ ಮಾಜಿ ಅಧ್ಯಕ್ಷ ಚಿಕ್ಕೇಗೌಡ ಹಾಜರಿದ್ದರು.

ಈ ಸಂದರ್ಭದಲ್ಲಿ ಎಲ್ಲಾ ಗೌರವಾನ್ವಿತ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ತಾಲ್ಲೂಕು ಅಧ್ಯಕ್ಷರಾದ ಆರ್. ಗಿರೀಶ್ ಮತ್ತು ಧರ್ಮ ಪತ್ನಿ ಅಂಜಲಿ ಗಿರೀಶ್ ಸನ್ಮಾನಿಸಿದರು.

Post a Comment

Previous Post Next Post