ಹನ್ನೆರಡನೇ ದಿನಕ್ಕೆ ಕಾಲಿಟ್ಟ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ; ಸು.ಕ.ರ.ಸೇ ರಾಘವೇಂದ್ರ ಗೌಡ ಬೆಂಬಲ

ಅರಕಲಗೂಡು : ವಿವಿಧ ಮೂಲಭೂತ ಸೌಕರ್ಯಕ್ಕಾಗಿ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳು ಕೈಗೊಂಡಿರುವ ಅನಿರ್ದಿಷ್ಟಾವಧಿಯ ಮುಷ್ಕರ ನ್ಯಾಯಸಮ್ಮತವಾಗಿದ್ದು,ಸರಕಾರ ಕೂಡಲೇ ಸವಲತ್ತು ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಡಾ. ಎಸ್ ರಾಘವೇಂದ್ರ ಗೌಡ್ರು ಆಗ್ರಹಿಸಿದರು.

ಗುರುವಾರ ತಾಲೂಕು ಕಚೇರಿ ಆವರಣದಲ್ಲಿ ಕಳೆದ ಹನ್ನೆರಡು ದಿನಗಳಿಂದ ಗ್ರಾಮ ಆಡಳಿತ ಅಧಿಕಾರಿಗಳು ಕೈಗೊಂಡಿರುವ ಮುಷ್ಕರ ಸ್ಥಳಕ್ಕೆ ಭೇಟಿ ಬೆಂಬಲ ಸೂಚಿಸಿ ಬಳಿಕ ಮಾತನಾಡಿದ ಅವರು, ಗ್ರಾಮ ಆಡಳಿತಾಧಿಕಾರಿಗಳು ವೈಯಕ್ತಿಕವಾದ ಯಾವುದೇ ಸಮಸ್ಯೆ ಮುಂದಿಟ್ಟುಕೊಂಡು ಮುಷ್ಕರ ಕೈಗೊಂಡಿಲ್ಲ.ತುಂಬಾ ಅವಶ್ಯವಿರುವ ಕಚೇರಿ,ಟೇಬಲ್ ಮತ್ತು ಕುರ್ಚಿ,ಗುಣಮಟ್ಟದ ಮೊಬೈಲ್ ಪೋನ್, ಲ್ಯಾಪ್ ಟಾಪ್,ಪ್ರಿಂಟರ್ ಮತ್ತು ಸ್ಕ್ಯಾನಿಂಗ್ ಹಾಗೂ ಅವಶ್ಯವಿರುವ ಮೊಬೈಲ್ ತಂತ್ರಾAಶಗಳ ಸೌಕರ್ಯ  ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊAಡು ಹೋರಾಟ ಮಾಡುತ್ತಿದ್ದಾರೆ. ಹನ್ನೊಂದು ದಿನಗಳ ಕಾಲ ಮುಷ್ಕರ ಕೈಗೊಂಡಿದ್ದರೂ ಕೂಡ ಸರಕಾರ ಯಾವುದೇ ಗಮನಹರಿಸಿಲ್ಲ. ಈ ಹೋರಾಟದ ವಿಚಾರವಾಗಿ ಸರ್ಕಾರ ಗಮನ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಪುನೀತ್,ಪದಾಧಿಕಾರಿಗಳಾದ ಹರೀಶ್,ಮೋಹನ್ ನಾಯ್ಕ, ,ಖಜಾಂಚಿ ಮಾಲಾಶ್ರೀ ಸೇರಿದಂತೆ 30ಕ್ಕೂ ಹೆಚ್ಚುಮಂದಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

                              News5kannada
                                Ravi Dummi

Post a Comment

Previous Post Next Post