ಅರಕಲಗೂಡು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬಿಸಿ ಟ್ರಸ್ಟ್ ಜ್ಞಾನದೀಪ ಯೋಜನೆಯಲ್ಲಿ ತಾಲ್ಲೂಕಿನ ಹೊನ್ನವಳ್ಳಿ ಹೇಮಾವತಿ ಅನುದಾನಿತ ಪ್ರೌಢಶಾಲೆಗೆ ಹತ್ತು ಜೊತೆ ಬೆಂಚು ಡಸ್ಕ್‌ಗಳನ್ನು ವಿತರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಜಿಲ್ಲಾ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಕೆ. ಸತೀಶ್ ಮಾತನಾಡಿ, 'ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಅಭಿವೃದ್ಧಿಗಾಗಿ ಗ್ರಾಮಾಭಿವೃದ್ಧಿ ಸಂಸ್ಥೆ ಕೈಗೊಂಡಿರುವ ಈ ಕಾರ್ಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ನೆರವಾಗಲಿದೆ' ಎಂದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷ ಧರ್ಮಪಾಲ್ ಮಾತನಾಡಿ, 'ಶಾಲೆಗೆ ಪೀಠೋಪಕರಣ ನೀಡಿರುವುದು ಬಡ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಿದಂತಾಗಿದೆ' ಎಂದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಶಾಂತ ಮಲ್ಲಪ್ಪ, ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಸಣ್ಣ ಸ್ವಾಮಿ, ಕಾರ್ಯದರ್ಶಿ ಬೇಲೂರೇ ಗೌಡ, ನಿರ್ದೇಶಕ ಪುಟ್ಟಲಿಂಗ, ಮುಖ್ಯ ಶಿಕ್ಷಕ ಮಂಜೇಗೌಡ, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವ್ ಕುಮಾರ್, ಗ್ರಾಮಾಭಿವೃದ್ಧಿ ಸಂಸ್ಥೆಯ ಮೇಲ್ವಿಚಾರಕಿ ಸುಜಾತ, ಸೇವಾ ಪ್ರತಿನಿಧಿಗಳಾದ ಅಶ್ವಿನಿ, ಬೇಬಿ, ಅನಸೂಯ ಉಪಸ್ಥಿತರಿದ್ದರು.
Tags
ಅರಕಲಗೂಡು