ಅರಕಲಗೂಡು: ಮುಪ್ಪಿನಲ್ಲಿ ಹಿರಿಯರು ಮತ್ತು ವೃದ್ಧರ ಸೇವೆ ಮಾಡಿ ಸಮಾಜದಲ್ಲಿ ಅವರನ್ನು ಗೌರವಯುತವಾಗಿ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸಮಾಜ ಸೇವಕ ಕಮಲೇಶ್ ಹೇಳಿದರು.
ತಾಲೂಕಿನ ಜೆ.ಹೊಸಹಳ್ಳಿ- ಗಂಗೂರು ಗ್ರಾಮದಲ್ಲಿ ಶುಕ್ರವಾರ ಬೆಳಕು ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಬೆಳಗಿನ ಉಪಹಾರ ನೀಡಿ ಮಾತನಾಡಿದ ಅವರು, ನಿವೃತ್ತ ಶಿಕ್ಷಕಿ ಗೀತಾ ಅವರು ವೃದ್ಧಾಶ್ರಮ ತೆರೆದು ಅಂಗವಿಕಲತೆ ಹೊಂದಿರುವ ಹಾಗೂ ವೃದ್ಧರ ಆರೈಕೆ ಮಾಡುತ್ತಿರುವುದು ಪುಣ್ಯದ ಕಾಯಕವಾಗಿದೆ. ದಾನಿಗಳು ವೃದ್ಧಾಶ್ರಮಗಳಿಗೆ ಕೈಲಾದ ಸಹಾಯ ಮಾಡಬೇಕು. ಈ ದಿನ ನಾನು ಉಪಹಾರ ನೀಡಿ ಕಿರು ಸಹಾಯ ಮಾಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಾಯ ಮಾಡುತ್ತೇನೆ. ವೃದ್ಧರ ಆರೋಗ್ಯದ ಹಿತ ದೃಷ್ಟಿಯಿಂದ ಆರೋಗ್ಯ ತಪಾಸಣೆಗೆ ಸಹಾಯ ಮಾಡುವುದಾಗಿ ತಿಳಿಸಿದರು.
News5kannada
Ravi Dummi
Tags
ಕೊಣನೂರು