ಅರಕಲಗೂಡಿನಲ್ಲಿ ನಡೆದ ದಸಂಸ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಷ್ಟ್ರ ಕವಿ ಕುವೆಂಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಅರಕಲಗೂಡು: 'ವಿಶ್ವಮಾನವ ಸಂದೇಶ ನೀಡಿದ ಕವಿ ಕುವೆಂಪು ಮಹಾನ್ ಮಾನವತಾವಾದಿ ಆದರ್ಶ ಅಳವಡಿಸಿಕೊಳ್ಳುವುದು ಅಗತ್ಯ' ಎಂದು ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ಸಂಚಾಲಕ ದುಮ್ಮಿಕೃಷ್ಣ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಸಂಸ ತಾಲ್ಲೂಕು ಸಮಿತಿ ಏರ್ಪಡಿಸಿದ್ದ ಸಭೆಯಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ಮಾತನಾಡಿದರು.
'ಸಾಮಾಜಿಕ ಅನಿಷ್ಠಗಳ ವಿರುದ್ಧ ಸಾಮಾಜಿಕ ಅರಿವು ಮೂಡಿಸಿದ ಇವರು ಶತಮಾನದ ಕವಿಯಾಗಿದ್ದರು' ಎಂದು ಸ್ಮರಿಸಿದರು. ಇದೇ ವೇಳೆ ನಡೆದ ದಸಂಸ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೋರೆಗಾಂವ್ ವಿಜಯೋತ್ಸವವನ್ನು ಜ1 ರಂದು ಪಟ್ಟಣದಲ್ಲಿ ಆಚರಿಸಲು ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲಾ ನೌಕರರ ಒಕ್ಕೂಟದ ಸಂಚಾಲಕ ವೆಂಕಟೇಶಮೂರ್ತಿ, ತಾಲ್ಲೂಕು ಸಮಿತಿ ಸಂಚಾಲಕ ಸಣ್ಣಪ್ಪ, ತಾಲ್ಲೂಕು ದಸಂಸ ಸಂಚಾಲಕ ಹರೀಶ್ ಮಾಗಲು, ಖಜಾಂಚಿ ಶಂಕರಯ್ಯ ಉಪಸ್ಥಿತರಿದ್ದರು.
Tags
ಅರಕಲಗೂಡು