ಅರಕಲಗೂಡು: ಪಟ್ಟಣದಲ್ಲಿ ಮಂಗಳವಾರ ಉಪ್ಪಾರ ಸಮುದಾಯದವರು ಗ್ರಾಮ ದೇವತೆ ದೊಡ್ಡಮ್ಮ ಹಾಗೂ ಶಾಂತವೀರಮ್ಮ ದೇವತೆಗಳಿಗೆ ಹೊಸಕ್ಕಿ ತಳಿಗೆ ಸಮರ್ಪಿಸಿದರು.
ವಿವಿಧ ಬಡಾವಣೆಗಳಿಂದ ಹಣ್ಣು,ಕಾಯಿ ತಟ್ಟೆಗಳನ್ನು ಹೊತ್ತು ವಾದ್ಯಗೊಳೊಂದಿಗೆ ಮೆರವಣಿಗೆಯಲ್ಲಿ ದೇವಾಲಯಕ್ಕೆ ತೆರಳಿ ದೇವರಿಗೆ ತಳಿಗೆ ಅರ್ಪಿಸಿ ಪೂಜೆ ಸಲ್ಲಿಸಿ ಜನ, ಜಾನುವಾರುಗಳಿಗೆ ರೋಗ ರುಜಿನಗಳು ಬರದಂತೆ ಹಾಗೂ ಉತ್ತಮ ಮಳೆಯಾಗಿ ಮುಂದಿನ ಸಾಲಿನ ಕೃಷಿ ಚಟುವಟಿಕೆಗಳು ತೊಂದರೆ ಇಲ್ಲದಂತೆ ನಡೆಸುವಂತೆ ಕೋರಿ ಪ್ರಾರ್ಥನೆ ಸಲ್ಲಿಸಿದರು.
ಸಮುದಾಯದ ಮುಖಂಡರು, ಮಹಿಳೆಯರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಕೃಷಿ ಕಾರ್ಯಗಳು ಮುಗಿದ ಬಳಿಕ ಮನೆಗೆ ಬರುವ ಹೊಸ ಧಾನ್ಯದಲ್ಲಿ ಗ್ರಾಮ ದೇವತೆಗೆ ತಳಿಗೆ ಅರ್ಪಿಸಿದ ಬಳಿಕ ಮನೆ ಉಪಯೋಗಕ್ಕೆ ಬಳಸುವುದು ಪದ್ಧತಿಯಾಗಿದೆ.
News5kannada
Ravi Dummi
Tags
ಅರಕಲಗೂಡು