ಅರಕಲಗೂಡು : ತುಂಬಾ ಪವರ್‌ಪುಲ್ ಪ್ರಧಾನಿಯೂ ಆಗಿರುವ ವಿಶ್ವಗುರುಗೆ ನಮ್ಮ ದೇಶದ ಮತದಾರರ ಪಟ್ಟಿಯನ್ನು ಕೊಡಲು ತೊಂದರೆ ಇದೆಯಾ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಚಿವ ಸಂತೋಷ್‌ಲಾಡ್ ಅವರು ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಖಾಸಗಿ ಸಿದ್ದರಾಮಯ್ಯ ಕ್ರಿಕೆಟ್ ಕಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಜೆಪಿ ಅಥವಾ ಚುನಾವಣಾ ಕಮಿಷನ್‌ನವರಾಗಲಿ ಎಲೆಕ್ಷನ್ ಓಟಿಂಗ್ ಪ್ಯಾಟ್ರನ್‌ನನ್ನು ಕೊಡಬಾರದಾಗಿ ಕಾನೂನನ್ನೆ ತಂದಿದ್ದಾರೆ.ಈ ಹೊಸ ಕಾನೂನಿನಿಂದ ಓಟರ್ ಲೀಸ್ಟ್ ಕೇಳಿದರೇ ಕೊಡುತ್ತಿಲ್ಲ.ಅದಕ್ಕೆ ಬಿಜೆಪಿಯವರನ್ನು ಕೇಳಿನೋಡಿ.ಈ ಬಗ್ಗೆ ಎಲ್ಲೋ ಒಂದು ರೀತಿಯಲ್ಲಿ ಟ್ಯಾಂಪರಿAಗ್ ಆಗುತ್ತಿದೆ ಎಂಬುದು ನನ್ನ ನಂಬಿಕೆಯಾಗಿದೆ. ಅಲ್ಲದೆ ವಿಪಕ್ಷಗಳು ಕೂಡ ಈ ಬಗೆ ಮಾತನಾಡಿಕೊಳ್ಳುತ್ತಿವೆ.ಚುನಾವಣೆಯಲ್ಲಿ ಸೋತ ಮತ್ತು ಗೆದ್ದ ತಕ್ಷಣ ಇಂತಹ ಮಾತು ಕೇಳಿಬರುತ್ತಿವೆ ಅಂತಲ್ಲ.ಮ್ಯಾನುಪಿಲೇಷನ್ ಮಾಡತಕ್ಕಂತಹದು ಬರೇ ಓಟಿಂಗ್ ಮಿಷನ್ ಅಲ್ಲ.ಇಡೀ ಸರಕಾರದ ಮೆಷಿನರಿನೇ ಬಳಕೆ ಮಾಡುತಿದ್ದಾರೆ.ಕೇಜ್ರಿವಾಲ್‌ಗೆ ಜೈಲಿಗೆ ಹಾಕಿದರು.ಈ ಬಗ್ಗೆ ಏನೂ ಕಾರಣ ಎಂಬುದು ತಿಳಿದಿಲ್ಲ.ಈ ರೀತಿಯ ಹಲವಾರು ವಿಷಯಗಳು ಇವೆ ಎಂದು ಅವರು ಕೇಂದ್ರ ಸರಕಾರದ ವಿರುದ್ಧ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ದೇಹಲಿ ಚುನಾವಣೆ ವೇಳೆ ಕೇವಲ 6ತಿಂಗಳಲ್ಲಿ 4ಲಕ್ಷ ಓಟ್‌ಗಳು ಜಾಸ್ತಿಯಾಗಿವೆ.ಈ ಹಿಂದೆ ನಡೆದ ಮಹಾರಾಷ್ಟç ಚುನಾವಣೆ ವೇಳೆಯೂ ಕೂಡ 40ರಿಂದ70ಲಕ್ಷ ಓಟ್‌ಗಳು ಹೆಚ್ಚಾಗಿರುವುದು ಕಂಡುಬAದಿದೆ.ಲೋಕಸಭೆ ಮತ್ತು ವಿಧಾನಸಭಾ ಚುನಾವಣೆ ಅಂತದಲ್ಲಿ ಕಂಡುಬAದಿರುವ ಹೆಚ್ಚಿನ ಮತದಾರರ ಸಂಖ್ಯೆ ಬಗ್ಗೆ ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಮಾತನಾಡಿದ್ದಾರೆ.ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೇ ಎಲ್ಲೋ ಒಂದು ರೀತಿಯಲ್ಲಿ ನ್ಯಾಯಾಯುತ ಚುನಾವಣೆ ನಡೆದಿಲ್ಲ ಎಂಬುದು ತಿಳಿಯುತ್ತಿದೆ.ಇದೊಂದು ರೀತಿಯ ಮೆಕಾನಿಷಮ್ ಕಲಿತಿರುವಂತೆ ಕಾಣುತ್ತಿದೆ ಎಂದರು.
ಗ್ಯಾರAಟಿ ಯೋಜನೆಯಿಂದ ರಾಜ್ಯ ಸರಕಾರ ನಿಗಮ ಮಂಡಳಿಗೆ ಹಣ ಕೊಡಲು ಆಗುತ್ತಿಲ್ಲ. ಮೈಕ್ರೋಫೈನಾನ್ಸ್ ಸಾಲ ಪಡೆದಿರುವ ಕೆಲ ಬಡಕುಟುಂಬಗಳು ಆತ್ಮಹತ್ಯೆಯಂತ ಕೃತ್ಯಕ್ಕೆ ಮುಂದಾಗುತ್ತಿರುವುದಕ್ಕೆ ಕಾರಣ ಎಂಬ ವಿರೋಧಪಕ್ಷದ ನಾಯಕ ಆರ್.ಆಶೋಕ್ ಅವರ ಹೇಳಿಕೆ ಕುರಿತು ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿ,ಅಶೋಕ್ ಅವರ ಕಾಲದಲ್ಲಿ ಎಷ್ಟು ಹಣವನ್ನು ಕೊಟ್ಟಿದ್ದಾರೆ.ಕಳೆದ 11ವರ್ಷದಿಂದ ಕೇಂದ್ರದಿAದ ರಾಜ್ಯಕ್ಕೆ ಬಂದಿರುವ ಅನುದಾನದ ಬಗ್ಗೆಯೂ ಅವರು ತಿಳಿಸಲಿ,ಆನಂತರ ಈ ಬಗ್ಗೆ ಚರ್ಚೆ ಮಾಡೋಣ ಎಂದರು.
ರಾಜ್ಯದಿAದ ಆಯ್ಕೆಗೊಂಡ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ.ರಾಜ್ಯಕ್ಕೆ ಅನುದಾನ ತರುವುದು,ಅಭಿವೃದ್ಧಿ ಕೈಗೊಳ್ಳುವುದು ಅವರ ಜವಬ್ದಾರಿಯಾಗಿದೆ.ರಾಜ್ಯದಿಂದ ಅವರಿಗೆ ಪ್ರಸ್ತಾವನೆ ಸಲ್ಲಿಕೆಮಾಡುವ ಅವಶ್ಯಕತೆಯಿಲ್ಲ.ಇಲ್ಲಿರುವ ಹೆಚ್‌ಇಎಲ್‌ಗೆ ಕೆಲಸ ಕೊಡಲು ಆಗಿಲ್ಲ.ನಿಮ್ಮದೇ ಕೇಂದ್ರ ಸರಕಾರವಿದೆ ಮಾಡಿ.ರೆಫೈಲ್ ಡೀಲ್ ಆಗಿದೆ.ಇದು ಈ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಕಾಲದಲ್ಲಿ ಆಗಿರುವುದು.ತಂತ್ರಜ್ಞಾನ ಬದಲಾವಣೆಯಾಗಬೇಕು.ಇಲ್ಲಿರುವರಿಗೆ ಕೆಲಸ ಕೊಡಬೇಕು.ಆಮೇಲೆ ಟೆಕ್ನಾಲಜಿ ವರ್ಗಾವಣೆಯಾಗಬೇಕು ಎಂಬುದಾಗಿದೆ.ಕುಮಾರಣ್ಣ ಅವರು ಕೇಂದ್ರ ಸಚಿವರಿದ್ದಾರೆ ಅಲ್ವ.23ಕಂಪನಿಗಳನ್ನು ಮಾರಾಟ ಮಾಡಲಾಗಿದೆ.ಬಿಎಸ್‌ಎನ್‌ಎಲ್ ಕುರಿತು ಅವರು ಮಾತನಾಡಲಿ.ಕುದುರೆಮುಖ ಹಾಳಾಗಲು ಕಾರಣವೇನು,ನಮ್ಮ ಕೋಲ್‌ಮೈನ್‌ನಿಂದ ಏಕೆ ವೀಕ್ ಆಗುತ್ತಿದೆ.ನಮ್ಮ ಸೆಂಟ್ರಲ್ ಗರ‍್ನಮೆಂಟ್‌ನಲ್ಲಿರುವAತಹ ಕಂಪನಿಗಳ ಬಗ್ಗೆಯೂ ಚರ್ಚೆ ಮಾಡೋಣ ಎಂದು ಹೇಳಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್,ಮುಖ್ಯಮAತ್ರಿ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟಿರುವ ವಿಚಾರ ಎಂದು ಅವರು ಉತ್ತರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೃಷ್ಣೇಗೌಡ,ಪ್ರಸನ್ನಕುಮಾರ್ ಇದ್ದರು.
News5Kannada
Ravi Dummi
Tags
ಅರಕಲಗೂಡು